ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೆಗ್ಗಾನ್ ವಿವಿ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂಜಿಎಫ್ 1,2,4 ಮತ್ತು 5ರಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 25 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಈ ಭಾಗದ ಹಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಮೆಗ್ಗಾನ್ ಆಸ್ಪತ್ರೆ, ಶರಾವತಿನಗರ ಎ ಮತ್ತು ಬಿ ಬ್ಲಾಕ್, ಹೊಸಮನೆ, ಜೈಲ್ ರಸ್ತೆ, ಕುವೆಂಪುರಸ್ತೆ, ಯುನಿಟಿ ಆಸ್ಪತ್ರೆ, ಶಿವಶಂಕರ್ ಗ್ಯಾರೇಜ್, ದೈವಜ್ಞ ಕಲ್ಯಾಣ ಮಂದಿರ, ಸುಬ್ಬಯ್ಯ ಆಸ್ಪತ್ರೆ, ನರ್ಸ್ ಕ್ವಾಟ್ರಸ್, ಆಯುರ್ವೇದ ಆಸ್ಪತ್ರೆ, ಸಾಗರ ರಸ್ತೆ ಸುರಂಗ, ಬಿಎಸ್’ಎನ್’ಎಲ್ ಕ್ವಾಟ್ರಸ್, ಗೊಮ್ಮಟೇಶ್ವರ ದೇವಸ್ಥಾನ, ಎಸ್ಪಿ ಕಚೇರಿ, ಪೊಲೀಸ್ ಠಾಣೆ, ಪೊಲೀಸ್ ಕ್ವಾಟ್ರಸ್, ಸಾಗರ ಮುಖ್ಯರಸ್ತೆ, ಅಶೋಕ್ ನಗರ, ಎಆರ್’ಬಿ ಕಾಲೋನಿ, ನಾಗರಾಜಪುರ ಬಡಾವಣೆ, ಕುವೆಂಪು ರಸ್ತೆ, ಜ್ಯೋತಿ ಗಾರ್ಡನ್, ದುರ್ಗಿಗುಡಿ, ಸವರ್ಲೈನ್ ರಸ್ತೆ, ಎಲ್‌ಐಸಿ ಕಚೇರಿ, ಮಿಷನ್ ಕಾಂಪೌಂಡ್, ಜೈಲ್ ಸರ್ಕಲ್ ರಸ್ತೆ, ಜಿಲ್ಲಾ ಪಂಚಾಯತ್ ಕಚೇರಿ, ಪಾರ್ಕ್ ಬಡಾವಣೆ, ಆರ್’ಎಂಆರ್ ರಸ್ತೆ, ತಿಲಕ್ ನಗರ, ಜಯನಗರ, ಬಸವನಗುಡಿ, ಅಚ್ಯುತರಾವ್ ಲೇಔಟ್, ಸವಳಂಗ ರಸ್ತೆ, ನೆಹರು ರಸ್ತೆ, ಡಿಸಿ ಕಚೇರಿ ಮತ್ತು ನಂಜಪ್ಪ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
Also read: ಎಲ್ಲಿದ್ರೂ ಬಂದು ಸರೆಂಡರ್ ಆಗು, ಇಲ್ಲಾಂದ್ರೆ…? ಮೊಮ್ಮಗನಿಗೆ ದೇವೇಗೌಡರ ಫೈನಲ್ ವಾರ್ನಿಂಗ್

ಇನ್ನು, ಸಂತೇಕಡೂರು ಗ್ರಾಮದ 66/11 ಕೆವಿ ವಿ.ವಿ.ಕೇಂದ್ರದ ಎಫ್-2 ಮತ್ತು ಎಫ್-4ರ ಮಾರ್ಗಗಳ ವ್ಯಾಪ್ತಿಯಲ್ಲಿ ಮಧ್ಯಂತರ ಕಂಬಗಳನ್ನು ಅಳವಡಿಸುವ ಮತ್ತು ವಾಹಕ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 25 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೂ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
ಸಂತೇಕಡೂರು, ಶ್ರೀರಾಮನಗರ, ರಾಂಪುರ, ಮಳಲಿಕೊಪ್ಪ, ಭಂಡಾರಿಕ್ಯಾಂಪ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news















Discussion about this post