ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಆಗಸ್ಟ್ 24 ರಂದು ಗಾರ್ಡನ್ ಏರಿಯಾ 1 ರಿಂದ 3ನೇ ಅಡ್ಡರಸ್ತೆ, ಸವಾರ್ಲೇನ್ ರಸ್ತೆ, ಎಲ್ಎಲ್ಆರ್ ರಸ್ತೆ, ಗೋಪಿವೃತ್ತ, ಜೆಪಿಎನ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದುರ್ಗಿಗುಡಿ 11 ಕೆ.ವಿ. ಮಾರ್ಗವನ್ನು ಭೂಗತ ಕೇಬಲ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಸ್ಪನ್ಪೋಲ್ ಅಳವಡಿಕೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ಪ್ರದೇಶಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
25 ಮತ್ತು 27ರಂದು ವಿದ್ಯುತ್ ವ್ಯತ್ಯಯ:
ಆಗಸ್ಟ್ 25 ಮತ್ತು 27 ರಂದು ನಗರದ ಕುವೆಂಪುನಗರ, ಎನ್ಇಎಸ್ ಬಡಾವಣೆ, ಜ್ಯೋತಿನಗರ, ನವುಲೆ ಹೊಸೂರು, ಡಿ.ವಿ.ಎಸ್. ಕಾಲೋನಿ, ಮ್ಯಾಕ್ಸ್ ಪೂರ್ಣೋದಯ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊಸ 11 ಕೆ.ವಿ. ಮಾರ್ಗದ ಕೆಲಸ ಇರುವುದರಿಂದ ಈ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹರಿಸಬೇಕೆಂದು ಮೆಸ್ಕಾಂ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post