ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಆಲ್ಕೋಳ ವಿ.ವಿ. ಕೇಂದ್ರದಿಂದ ಬರುವ ಎ.ಎಫ್-1, 2 ಮತ್ತು 3ರ ಫೀಡರ್‌ಗಳಲ್ಲಿ ಕೆ.ಎನ್.ಎನ್.ಎಲ್. ಪೈಪ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನಗರದ ವಿವಿಧ ಪ್ರದೇಶದಲ್ಲಿ ಏಪ್ರಿಲ್ 28ರ ನಾಳೆ ಬೆಳಗ್ಗೆ 9:30ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಶಿವಮೊಗ್ಗ ಮೆಸ್ಕಾಂನ ನಗರ ಉಪ-ವಿಭಾಗ-3ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಶ್ರೀರಾಮ್‌ಪುರ, ಭೂಮಿಕಾ ಇಂಡಸ್ಟ್ರೀಸ್, ಪೆಸೆಟ್ ಕಾಲೇಜ್, ಕಿಮ್ಮನೆ ಗಾಲ್ಫ್ ಸ್ಟೇಡಿಯಂ, ಹಾಲದೇವರಹೊಸೂರು, ಗುಡ್ಡದ ಹರಕೆರೆ, ಶಕ್ತಿಧಾಮ, ಪೊಲೀಸ್ ಲೇಔಟ್, ವಿರುಪಿನಕೊಪ್ಪ, ಸಿದ್ಲಿಪುರ, ಮುದ್ದಿನಕೊಪ್ಪ, ಭೋವಿ ಕಾಲೋನಿ ತ್ಯಾವರಕೊಪ್ಪ, ಸಿಂಹಧಾಮ, ವೀರಗಾರನಭೈರನಕೊಪ್ಪ, ಬಿ.ಎಸ್.ಎನ್.ಎಲ್.ಬಡಾವಣೆ, ಲಂಬಾಣಿ ತಾಂಡ, ಚೆನ್ನಹಳ್ಳಿ, ವೀರನಬೆನವಳ್ಳಿ, ಆಲ್ಕೋಳ ಸರ್ಕಲ್, ಮಂಗಳಾಮಂದಿರ ರಸ್ತೆ, ಎ.ಬಿ.ವಿ.ಪಿ ಲೇಔಟ್, ಎಸ್.ವಿ.ಬಡಾವಣೆ, ಗಾಡಿಕೊಪ್ಪ, ಮಲ್ಲಿಗೇನಹಳ್ಳಿ, ಶರಾವತಿ ದಂತ ವೈದ್ಯಕೀಯ ಕಾಲೇಜು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post