ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿರುವ ಜಾಕ್‍ವೆಲ್‍ನಲ್ಲಿ ಈಗಿರುವ ಟರ್ಬೈನ್ ಪಂಪ್‍ನ್ನು ಬದಲಾಯಿತಿ ಹೊಸದಾಗಿ 150 ಹೆಚ್‍ಪಿ ಪಂಪ್‍ನ್ನು ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ. 27 ರಿಂದ 31ರವರೆಗೆ ಏರು ಕೊಳವೆ ಮಾರ್ಗ 1,2,3 ಮತ್ತು 6 ರಿಂದ ನೀರು ಸರಬರಾಜಾಗುವ ಗೋಪಾಳಗೌಡ ಬಡಾವಣೆ, ಸ್ವಾಮಿ ವಿವೇಕಾನಂದ ಬಡಾವಣೆ, ಅಪ್ಪಾಜಿರಾವ್ ಕಾಂಪೌಂಡ್, ಸರ್ಕಾರಿ ಶಾಲೆ, ಕಾರ್ಪೋರೇಷನ್, ಬಿ.ಬಿ.ಸ್ಟ್ರೀಟ್, ಮಲ್ಲೇಶ್ವರ ನಗರ, ಮೆಗ್ಗಾನ್ ಆಸ್ಪತ್ರೆ, ಬಸ್ಟ್ಯಾಂಡ್, ಕಲ್ಲಹಳ್ಳಿ, ವಿನೋಬನಗರ, ಆಲ್ಕೋಳ, ಎಪಿಎಂಸಿ, ನರಸಿಂಹ ಬಡಾವಣೆ, ಕುವೆಂಪುರಸ್ತೆ, ಬೂಸ್ಟರ್ ಪಂಪ್‍ಹೌಸ್ ಆವರಣ, ಕಾರ್ಪೋರೇಷನ್ ಟ್ಯಾಂಕ್ ಪ್ರದೇಶಗಳಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಸಾರ್ವಜನಿಕರು ಸಹಕರಿಸಬೇಕು ಎಂದು ಶಿವಮೊಗ್ಗ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ನಿರ್ವಹಣೆ ಮತ್ತು ಪಾಲನೆಯ ಸಹಾಯಕ ಕಾರ್ಯಪಾಲಕ ಅಭಿಯಂತತರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post