ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಬಿ ರಸ್ತೆಯಲ್ಲಿರುವ ಸಾರ್ವಜನಿಕ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ 18 ಮೆಟ್ಟಿಲುಗಳ ಹಾಗೂ ಪಂಚಲೋಹದ ಕವಚ ಮತ್ತು ನೂತನ ಗರ್ಭಗುಡಿಗಳ ಉದ್ಘಾಟನೆ ಹಾಗೂ ವಿಗ್ರಹಗಳ ಪುನರ್ ಪ್ರತಿಷ್ಠಾಪನ ಕಾರ್ಯಕ್ರಮ ನ.13 ಮತ್ತು14ರಂದು ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಎಸ್.ಸಿ. ಲೋಕೇಶ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1975ರಲ್ಲಿಯೇ ಈ ದೇವಸ್ಥಾನವನ್ನು ಸಣ್ಣ ಪ್ರಮಾಣದಲ್ಲಿ ನಿರ್ಮಿಸಲಾಗಿತ್ತು. ಅಂದಿನಿಂದ ಇಲ್ಲಿಯವರೆಗೆ ಭಕ್ತರ ಸಂಖ್ಯೆ ಹೆಚ್ಚಿದಂತೆ ಅತಿ ದೊಡ್ಡದಾಗಿ ಶಬರಿಮಲೈ ಶ್ರೀಕ್ಷೇತ್ರದಲ್ಲಿ ಇರುವಂತೆ ಇಲ್ಲಿಯೂ ಕೂಡ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಈಗ ಪಂಚಲೋಹ ಕವಚದ 18 ಮೆಟ್ಟಿಲುಗಳನ್ನು ದಾನಿಗಳ ಸಹಕಾರದಲ್ಲಿ ನಿರ್ಮಿಸಲಾಗಿದೆ. ಮುಖ್ಯವಾಗಿ 18 ಮೆಟ್ಟಿಲಿನ ಕವಚ ಲೇಪನ ದಾನಿಗಳು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮತ್ತು ಅವರ ಕುಟುಂಬದವರು ಆಗಿದ್ದಾರೆ ಎಂದರು.

ಹಾಗೆಯೇ ನ.16ರಿಂದ ಜ.14ರವರೆಗೆ ಪೂಜಾ ಮಹೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನ.16ರಂದು 18ನೇ ವರ್ಷದ ಅನ್ನಪೂರ್ಣ ಯೋಜನೆ ಆರಂಭವಾಗಲಿದೆ. ನ.16ರಿಂದ ಜ.14ರವರೆಗೆ ದೇವಸ್ಥಾನದ ವತಿಯಿಂದ ಅಯ್ಯಪ್ಪ ಸ್ವಾಮಿ ವ್ರತದಾರಿಗಳಿಗೆ ಪ್ರತಿದಿನ ಮಧ್ಯಾಹ್ನ 1ರಿಂದ 2.30ರವರೆಗೆ ಅನ್ನದಾನವನ್ನು ಏರ್ಪಡಿಸಲಾಗಿದೆ. ಅನ್ನದಾನ ಸೇವೆಗೆ ದಾನಿಗಳು ಒಂದು ದಿನದ ಸೇವೆಗಾಗಿ 5001 ರೂ.ಗಳನ್ನು ನೀಡಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ಸಿ.ಹೊನ್ನಪ್ಪ, ಕಾರ್ಯದರ್ಶಿ ಆರ್.ವಿಜಯ್‍ಕುಮಾರ್ ಶೆಟ್ಟಿ, ಪಿ.ಶಂಕರ್, ಗುರುಸ್ವಾಮಿಗಳಾದ ಮಣ್ಣುನಾಟರ್ ಗುರುಸ್ವಾಮಿ, ಅಪ್ಪುಕುಟ್ಟಿ ಗುರುಸ್ವಾಮಿ, ಎಸ್.ಕೃಷ್ಣಶೆಟ್ಟಿ ಗುರುಸ್ವಾಮಿ, ಟಿ.ಆರ್.ಸತ್ಯನಾರಾಯಣ , ಬಿ.ಪೂಸ್ವಾಮಿ, ಮೋಹನ್‍ಕುಮಾರ್, ಸಿ.ಮಂಜುನಾಥ್, ಎ.ಕೇಶವನ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post