ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪುಷ್ಪ ಪರ್ಫಾಮಿಂಗ್ ಆರ್ಟ್ಸ್ ಸೆಂಟರ್ ವತಿಯಿಂದ ಕಲಾಪ್ರೇಮಿಗಳಿಗೆ ಮನರಂಜನೆ ಹಾಗೂ ಕಲಾ ಸೊಬಗನ್ನು ನೀಡುವ ಎರಡು ವಿಶೇಷ ನೃತ್ಯ ಕಾರ್ಯಕ್ರಮಗಳು (Dance Program) ಆ.30ರ ಭಾನುವಾರ ಶಿವಮೊಗ್ಗದಲ್ಲಿ (Shivamogga) ವಿಜೃಂಭಣೆಯಿಂದ ನಡೆಯಲಿವೆ.
ನಗರದ ವಿಜಯನಗರದಲ್ಲಿರುವ ಪುಷ್ಪಾಂಜಲಿ ಸಭಾಂಗಣದಲ್ಲಿ ಆ.30ರಂದು ಬೆಳಗ್ಗೆ 8.30ರಿಂದ ‘ನೃತ್ಯಾರ್ಚನೆ-2026’ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಶಿವಮೊಗ್ಗದ ವಿ. ದುಶ್ಯಂತ್ ಎಸ್., ಸುಷ್ಮಾ ಶ್ರೀಧರ್ ಹಾಗೂ ತುಮಕೂರಿನ ವಿ. ನಳಿನಕುಮಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಕಲಾಶ್ರೀ ಸಂಸ್ಥೆಯ ಪ್ರಾಚಾರ್ಯೆ ವಿ. ಪುಷ್ಪ ಕೃಷ್ಣಮೂರ್ತಿ ಉಪಸ್ಥಿತರಿರಲಿದ್ದಾರೆ.
ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ, ನವದೆಹಲಿ ಹಾಗೂ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
Shivamogga : ಸಂಜೆ ಜನಪದ ನೃತ್ಯ ಕಲಾ ಉತ್ಸವ
ಇದೇ ದಿನ ಸಂಜೆ 4 ಗಂಟೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ‘ಜನಪದ ನೃತ್ಯ ಕಲಾ ಉತ್ಸವ-2026’ ಅದ್ದೂರಿಯಾಗಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಪುಷ್ಪ ಪರ್ಫಾಮಿಂಗ್ ಆರ್ಟ್ಸ್ ಸೆಂಟರ್‌ನ ವಿದ್ಯಾರ್ಥಿಗಳು ವಿವಿಧ ರಾಜ್ಯಗಳ ವೈವಿಧ್ಯಮಯ ಭಾರತೀಯ ಜನಪದ ನೃತ್ಯಗಳನ್ನು ಪ್ರದರ್ಶಿಸಲಿದ್ದು, ಕಲಾಪ್ರೇಮಿಗಳು ಹಾಗೂ ಪ್ರೇಕ್ಷಕರಿಗೆ ವಿಶಿಷ್ಟ ಕಲಾನುಭವ ನೀಡಲಿದ್ದಾರೆ.
Also Read>> ಈಗಲೇ ಲೋಕಸಭೆ ಚುನಾವಣೆ ನಡೆದ ರಾಜ್ಯದಲ್ಲಿ BJPಗೆ ಎಷ್ಟು ಸ್ಥಾನ | CVoter ಸಮೀಕ್ಷೆ ಏನು ಹೇಳುತ್ತೆ?
ಕಾರ್ಯಕ್ರಮಕ್ಕೆ ಬೆಂಗಳೂರಿನ ರಂಗಭೂಮಿ, ಭರತನಾಟ್ಯ, ಕಂಠದಾನ, ಕಿರುತೆರೆ ಹಾಗೂ ಬೆಳ್ಳಿತೆರೆಯ ಪ್ರತಿಷ್ಠಿತ ಕಲಾವಿದ ವಿ. ಭಾರದ್ವಾಜ್ ದಯಾನಿಧಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಕರ್ನಾಟಕ ಕಲಾಶ್ರೀ ವಿ. ಶ್ರೀಮತಿ ಪುಷ್ಪ ಕೃಷ್ಣಮೂರ್ತಿ ಅವರ ಉಪಸ್ಥಿತಿಯಲ್ಲಿ ಜನಪದ ನೃತ್ಯ ಕಲಾ ಉತ್ಸವ ನಡೆಯಲಿದೆ.
ಎರಡೂ ಕಾರ್ಯಕ್ರಮಗಳಿಗೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕು. ಅಕ್ಷಿತ ವಿ., ಗುರು ಯೋಗೇಶ್ ಎನ್. ಹಾಗೂ ಶಿಷ್ಯವೃಂದದವರು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









