ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶದಲ್ಲಿ ಹಿಜಾಬ್ ಅಥವಾ ಕೇಸರಿ ಶಾಲು ಮುಖ್ಯವಲ್ಲ. ತ್ರಿವರ್ಣ ಧ್ವಜವೇ ಸರ್ವಶ್ರೇಷ್ಠ. ವಿದ್ಯಾರ್ಥಿಗಳು ಹಿಜಾಬ್ ಕೇಸರಿ ಶಾಲು ವಿಚಾರ ಕೈಬಿಡಬೇಕು. ಹಿಂದಿನಂತೆ ತರಗತಿಗಳಲ್ಲಿ ಬ್ರಾತೃತ್ಬ ಭಾವನೆಯಿಂದ ಇರಬೇಕು. ವಿದ್ಯಾರ್ಥಿಗಳು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಎನ್‌ಎಸ್‌ಯುಐ ಮನವಿ ಮಾಡಿದೆ.
ನಿನ್ನೆ ಕೇಸರಿ ಧ್ವಜ ಹಾರಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ರಾಷ್ಟ್ರಧ್ವಜ ಧ್ವಜಾರೋಹಣ ಮಾಡಿ ಮನವಿ ಮಾಡಲಾಯಿತು. ಭಾರತ ಹಲವು ಧರ್ಮಗಳ ಬೀಡು. ನಮ್ಮ ಸಂವಿಧಾನದಲ್ಲಿ ಎಲ್ಲ ಧರ್ಮಗಳ ಆಚರಣೆಗೂ ಅವಕಾಶವಿದ್ದು, ಎಲ್ಲರೂ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಆದರೆ, ರಾಜಕೀಯ ಹಿತಾಸಕ್ತಿಯಿಂದ ಕಾಣದ ಕೈಗಳ ಕುಮ್ಮಕ್ಕಿನಿಂದಾಗಿ ಹಿಜಾಬ್ ಕೇಸರಿಶಾಲು ವಿವಾದ ಸೃಷ್ಟಿಯಾಗಿದ್ದು, ಇದನ್ನು ಎನ್ ಎಸ್ ಯು ಐ ತೀವ್ರವಾಗಿ ಖಂಡಿಸುತ್ತದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post