ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಗರದ ಹೊಳೆಬಾಗಿಲು ನಲ್ಲಿ ನಿರ್ಮಾಣ ಆಗಿರುವ ಸೇತುವೆಗೆ ಸಿಗಂದೂರು ಎಂದು ಹೆಸರಿಡಲು ರಾಜಕಾರಣಿಗಳು ಮುಂದಾಗಿದ್ದಾರೆ. ಆದರೆ ಈ ಬಗ್ಗೆ ಸ್ಥಳೀಯರ ಬಲವಾದ ವಿರೋಧವಿದ್ದು, ಯಾವುದೇ ಧರ್ಮಕ್ಕೆ ಸೇರಿದ ಹೆಸರನ್ನು ಇಡಬಾರದ ಬದಲಾಗಿ ಶರಾವತಿ ತೂಗು ಸೇತುವೆ ಎಂದು ಹೆಸರು ಇಡಬೇಕು ಎಂದು ಹಿರಿಯ ಸಾಮಾಜಿಕ ಹೋರಾಟಗಾರ ಹಾಗೂ ಸಾಹಿತಿ ಅ.ರಾ ಶ್ರೀನಿವಾಸ ಒತ್ತಾಯಿಸಿದರು.
ಇದೇ 14 ನೇ ತಾರೀಖಿಗೆ ಉದ್ಘಾಟನೆ ಗೋಳ್ಳಲಿರುವ ಹೊಳೆಬಾಗಿಲಿನ ಹೊಸ ಸೇತುವೆ, ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯಾಗಿದೆ. 2.4 ಕಿಮೀ ಉದ್ದದ ತೂಗು ಸೇತುವೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಲಿದ್ದಾರೆ. ಈ ಸೇತುವೆ ನಿರ್ಮಾಣಕ್ಕೆ ಅನೇಕ ಹೋರಾಟಗಳು ನಡೆದಿವೆ. ಅವರನ್ನು ಗಣನೆಗೆ ತೆಗೆದುಕೊಳ್ಳದೇ ಕೇವಲ ರಾಜಕೀಯ ಲಾಭಕ್ಕಾಗಿ ಈ ಹೆಸರು ಇಡಲಾಗುತ್ತಿದೆ. ಆದರೆ ಇದಕ್ಕೆ ಆ ಭಾಗದ ಜನರ ವಿರೋಧವಿದೆ.

ಆದರೆ ಸೇತುವೆ ದೇವಸ್ಥಾನಕ್ಕೆ ಸೇರಿದಲ್ಲ, ಹಾಗಾಗಿ ರಾಜ್ಯ ಸರ್ಕಾರ ಈ ಸೇತುವೆಗೆ ಹೆಸರು ಶಿಫಾರಸು ಮಾಡಬೇಕು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post