ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಿಇಎಸ್‌ಐಎಎಂಎಸ್ ಕಾಲೇಜಿನ #PESIAMS College ನಿರ್ವಹಣಾಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಹಳೆಯ ವಿದ್ಯಾರ್ಥಿ ಸಂವಾದ ಯಶಸ್ವಿಯಾಗಿ ನಡೆಯಿತು.
ಕಾಲೇಜಿನ ಹಳೆಯ ವಿದ್ಯಾರ್ಥಿನಿ ಹಾಗೂ ಶಿವಮೊಗ್ಗದ ಗ್ಯಾಲಿಗರ್ ಸಂಸ್ಥೆಯ ನಿರ್ವಾಹಕರಾದ ಕೆ.ಆರ್. ಮಂಜು ಅವರು ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿದ್ಯಾರ್ಥಿ ದೆಸೆಯಿಂದ ಹಿಡಿದು ಯಶಸ್ವಿ ಉದ್ಯಮಿಯಾಗುವವರೆಗಿನ ತಮ್ಮ ಬದುಕಿನ ಪಯಣವನ್ನು ಹಂಚಿಕೊಂಡರು. ಉತ್ತಮ ಉದ್ಯೋಗ ಪಡೆಯಲು ಅಗತ್ಯವಾದ ಸಂವಹನ ಕೌಶಲ್ಯ ಮತ್ತು ತಾಂತ್ರಿಕ ಕೌಶಲ್ಯಗಳ ಮಹತ್ವವನ್ನು ಒತ್ತಿ ಹೇಳಿದರು.
ತಂತ್ರಜ್ಞಾನ, ಉತ್ಪಾದನೆ ಮತ್ತು ಸೇವಾ ವಲಯಗಳಂತಹ ಉದ್ಯೋನ್ಮುಖ ಕ್ಷೇತ್ರಗಳಲ್ಲಿ ಯುವ ಪದವೀಧರರಿಗೆ ಅವಕಾಶಗಳನ್ನು ಕುರಿತಂತೆ ಚರ್ಚಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು.
ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಂ. ಸುದರ್ಶನ್, ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಿ. ಮೋಹನ್, ಹಳೆಯ ವಿದ್ಯಾರ್ಥಿ ಸಂಘದ ಸಂಚಾಲಕರಾದ ಎಸ್. ಅಭಿಷೇಕ್ ಹಾಗೂ ನಿರ್ವಹಣಾಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕ್ಲಸ್ಟರ್ ಫೋರಂ ಹಳೆಯ ವಿದ್ಯಾರ್ಥಿ ಸಂವಾದ
ಪಿಇಎಸ್‌ಐಎಎಮ್‌ಎಸ್ ಕಾಲೇಜಿನ ಬಿಸಿಎ ವಿಭಾಗದ ಕ್ಲಸ್ಟರ್ ಫೋರಂ ವತಿಯಿಂದ ಬಿಎಸ್ಸಿ ವಿದ್ಯಾರ್ಥಿಗಳಿಗಾಗಿ ಹಳೆಯ ವಿದ್ಯಾರ್ಥಿ ಸಂವಾದವನ್ನು ಆಯೋಜಿಸಲಾಗಿತ್ತು.
ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಅಭಿಷೇಕ್ ಜಿ ಮತ್ತು ಅಂಕಿತಾ ಅನಿಲ್ ಅವರುಗಳು ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಕಾಲೇಜಿನಲ್ಲಿ ತಮ್ಮ ಹಳೆಯ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಳೆಯ ವಿದ್ಯಾರ್ಥಿ ಅಭಿಷೇಕ್ ಅವರು ಪದವಿ ನಂತರದಲ್ಲಿ ಉದ್ಯೋಗವನ್ನು ಪಡೆದುಕೊಳ್ಳುವಾಗ ಯಾವ ರೀತಿಯ ಸವಾಲುಗಳು ಎದುರಾಗುತ್ತವೆ. ಅವುಗಳನ್ನು ಎದುರಿಸುವುದು ಹೇಗೆ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿದರು. ಅಲ್ಲದೆ ಉದ್ಯೋಗ ಕ್ಷೇತ್ರದಲ್ಲಿ ತಾವು ಪಡೆದುಕೊಂಡ ಅನುಭವಗಳನ್ನು ಹಂಚಿಕೊಂಡರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಅಂಕಿತ ಅನಿಲ್ ಅವರು ಮಾತನಾಡಿ, ಪದವಿಯ ನಂತರದಲ್ಲಿ ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಳ್ಳಲು ಅನುಕೂಲವಾಗುವಂತಹ ಕೆಲವು ವೆಬ್‌ಸೈಟ್ ಹಾಗೂ ಲಿಂಕ್ಡ್ ಇನ್’ನಂತಹ ಹಲವು ಆ್ಯಪ್‌ಗಳ ಬಗ್ಗೆ ಮಾಹಿತಿ ಒದಗಿಸಿದರಲ್ಲದೆ ಉದ್ಯೋಗವನ್ನು ಪಡೆದುಕೊಳ್ಳುವಾಗ ತಮ್ಮ ರೆಸ್ಯೂಮೆಯನ್ನು ಹೇಗೆ ಬಲಪಡಿಸಿಕೊಳ್ಳಬೇಕೆಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು.
ಕೊನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು. ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಂ. ಸುದರ್ಶನ್, ಬಿಎಸ್ಸಿ ವಿಭಾಗದ ಮುಖ್ಯಸ್ಥರಾದ ಡಾ.ಯಶಸ್ವಿತ ಚವ್ಹಾನ್, ಕ್ಲಸ್ಟರ್ ಪೋರಂ ಸಂಯೋಜಕರಾದ ಡಿ.ಆರ್. ಮೇಘನಾ, ಹಳೆಯ ವಿದ್ಯಾರ್ಥಿ ಸಂಘದ ಸಂಚಾಲಕರಾದ ಎಸ್. ಅಭಿಷೇಕ್ ಹಾಗೂ ಬಿಎಸ್ಸಿ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















