ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಹಾ ಶಿವರಾತ್ರಿ ಅಂಗವಾಗಿ ಲೋಕಕಲ್ಯಾಣಕ್ಕಾಗಿ ಸಂಕಲ್ಪಿಸಲಾಗಿದ್ದ ಸಾಮೂಹಿಕ ಓಂ ನಂಃ ಶಿವಾಯ ಜಪ ಯಜ್ಞ ಸಮರ್ಪಣಾ ಕಾರ್ಯಕ್ರಮ ಫೆ.29ರಂದು ನಡೆಯಲಿದೆ.
ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ಅಂದು ಸಂಜೆ 5.30ರಿಂದ 8 ಗಂಟೆಯವರೆಗೂ ಕಾರ್ಯಕ್ರಮ ನಡೆಯಲಿದೆ.
500 ಕ್ಕೂ ಅಧಿಕ ಶಿವ ಭಕ್ತರಿಂದ ದಶಲಕ್ಷ ಬಾರಿ ಸಾಮೂಹಿಕ ಓಂ ನಮಃ ಶಿವಾಯ ಜಪ ಆರ್ಟ್ ಆಫ್ ಲಿವಿಂಗ್ ತಂಡದಿಂದ ಶಿವ ನಾಮಸ್ಮರಣೆ ಪೂಜ್ಯ ರವಿಶಂಕರ್ ಗುರೂಜಿಯವರ ಧ್ವನಿ ಸುರಳಿಯಲ್ಲಿ ಶಿವ ಧ್ಯಾನ, ವೇ ಬ್ರ ಶ್ರೀ ಅ ಪ ರಾಮಭಟ್ ರವರ ಮಾರ್ಗದರ್ಶನದಲ್ಲಿ ಶಿವ ಪೂಜಾ ಆರಾಧನಾ ಉತ್ಸವ, ವಿಧುಷಿ ಸಹನಾ ಚೇತನ್ ಶಿಷ್ಯ ವೃಂದದವರಿಂದ ಶಿವ ತಾಂಡವ ನೃತ್ಯ ವೈಭವ, ವಿದ್ವಾಂಸರಿಂದ ವಿಶೇಷ ಉಪನ್ಯಾಸ ನಡೆಯಲಿದೆ.
ಆನಂತರ, ವೇದ ಪಂಡಿತರಿಗೆ ಗೌರವ ಸನ್ಮಾನ,ಭಾಗವಹಿಸುವ ಪ್ರತಿಯೊಬ್ಬರೂ ಸ್ವಹಸ್ತದಿಂದ ಈಶ್ವರನಿಗೆ ಜಲಾಭಿಷೇಕ ಮಾಡವ ಸದಾವಕಾಶ ನಂತರ ಸಾಮೂಹಿಕವಾಗಿ ಬಿಲ್ವಾರ್ಚನೆ, ಭಸ್ಮಾರ್ಚನೆ ಹಾಗೂ ವಿವಿಧ ಪುಷ್ಪಗಳಿಂದ ಅಷ್ಟೋತ್ತರ ಪೂಜೆ, ಸಾಮೂಹಿಕವಾಗಿ ಲಿಂಗಾಷ್ಟಕಂ ಗಾಯನ ನಂತರ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ.
ಸಂಕಲ್ಪ ಕಾಣಿಕೆ ಕನಿಷ್ಠ 21 ರೂ. ಸಮರ್ಪಿಸಿ ಭಗವಂತನ ಸದ್ಗುರುಗಳ ಕೃಪೆಗೆ ಪಾತ್ರರಾಗಲು ಆಯೋಜಕರು ಕೋರಿದ್ದಾರೆ.
ದಿ ಆರ್ಟ್ ಆಫ್ ಲಿವಿಂಗ್ ಶಿವಮೊಗ್ಗ ಶಾಖೆ, ಭಜನಾ ಪರಿಷತ್ (ಶಿವಮೊಗ್ಗ ನಗರದ ಭಜನಾ ಮಂಡಳಿಗಳ ಒಕ್ಕೂಟ) ಸಂಸ್ಕಾರ ಪ್ರತಿಷ್ಠಾನ (ಆರೋಗ್ಯ ಆರಾಧನಾ ಆಧ್ಯಾತ್ಮ) ಅರ್ಚಕ ವೃಂದ, ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ ಹಾಗೂ ಹಿಂದೂ ಆಚಾರ್ಯ ಮಹಾ ಸಭಾ ಕರ್ನಾಟಕ/ಶಿವಮೊಗ್ಗ ಇವರುಗಳ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.
Get in Touch With Us info@kalpa.news Whatsapp: 9481252093
Discussion about this post