ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀ ಶನೈಶ್ಚರ ದೇವಾಲಯ, ಭಜನಾ ಪರಿಷತ್, ಸಂಸ್ಕಾರ ಪ್ರತಿಷ್ಠಾನ, ಇವರ ಸಯುಕ್ತ ಆಶ್ರಯದಲ್ಲಿ ಜುಲೈ 26ರಂದು ಬೆಳಿಗ್ಗೆ 9:30ಕ್ಕೆ ಶುಭ ಮಂಗಳ ಸಮುದಾಯ ಭವನದಲ್ಲಿ ಸಹಸ್ರಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ದಿವ್ಯಸತ್ಸಂಗ ಹಾಗೂ ಆಶೀರ್ವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಭಜನಾ ಮಂಡಳಿ ಪರಿಷತ್ತಿನ ಪೋಷಕರಾದ ಶ್ರೀ ರಂಜಿನಿ ದತ್ತಾತ್ರಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶಿವಮೊಗ್ಗ ನಗರಕ್ಕೆ ಪ್ರಪ್ರಥಮವಾಗಿ ಬೆಂಗಳೂರಿನ ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿರುವ ಶ್ರೀಧರ ಶ್ರೀ ಗುಡ್ಡ ಸಂಸ್ಥಾಪಕರಾದ ಹಾಗೂ ದೇವಿ ಉಪಾಸಕರಾದ ಪೂಜ್ಯ ಗುರುಮಾತ ಅಮ್ಮ ಅವರ ದಿವ್ಯ ಸಾನಿಧ್ಯದಲ್ಲಿ ಲೋಕಕಲ್ಯಾಣಕ್ಕಾಗಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಅಂದು ಬೆಳಿಗ್ಗೆ 9.20ರಿಂದ ಭಜನಾ ಪರಿಷತ್ ನ ಅಧ್ಯಕ್ಷರು ಹಾಗೂ ಶ್ರೀ ಶನೈಶ್ವರ ಸ್ವಾಮಿ 1 ದೇವಸ್ಥಾನ ಪ್ರಧಾನ ಅರ್ಚಕರಾದ ವೇದ ಬ್ರಹ್ಮ ಶ್ರೀ ವಿನಾಯಕ ಬಾಯರಿ ಅವರ ನೇತೃತ್ವದಲ್ಲಿ ಗಣಪತಿ ಪೂಜೆ, ಕುಲದೇವರ ಪ್ರಾರ್ಥನೆ, ಸಾಮೂಹಿಕ ಸಂಕಲ್ಪ ನಂತರ ಶ್ರೀಚಕ್ರ ಪೂಜೆ, ಲಲಿತಾ ಸಹಸ್ರನಾಮ, ಕುಂಕುಮಾರ್ಚನೆ ಪ್ರಾರಂಭವಾಗುವುದು ಎಂದರು.
Also read: ಗಮನಿಸಿ | ಲಿಂಗನಮಕ್ಕಿ ನದಿ ಪಾತ್ರದ ಜನರಿಗೆ ಕೆಪಿಸಿಎಲ್ ಮುನ್ನೆಚ್ಚರಿಕೆ
ಇದೆ ಸಂದರ್ಭದಲ್ಲಿ ವಿದ್ಯಾನ್ ಶ್ರೀ ಹಂದಲಸು ವಾಸುದೇವ ಭಟ್ಟರು” ಪ್ರಸಿದ್ದ ವಾಗಿಗಳು ಶಿವಮೊಗ್ಗ ಇವರಿಂದ ಶ್ರೀ ಲಲಿತಾ ತ್ರಿಪುರಾ ಸುಂದರಿ ಆರಾಧನೆ ಹಾಗೂ ಪೂಜ್ಯ ಗುರು ಮಾತಾ ಅಮ್ಮನವರ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ, ಎಂದರು.
ಭಜನಾ ಪರಿಷತ್ ನ ಕಾರ್ಯದರ್ಶಿ ಶ್ರೀ ಶಬರೀಶ್ ಕಣ್ಣನ್ ಅವರು ನೇತೃತ್ವದಲ್ಲಿ ದಿವ್ಯ ಸತ್ಸಂಗ ಕಾರ್ಯಕ್ರಮ ನಡೆಯುವುದು, ಪೂಜ್ಯ ಗುರುಮಾತಾ ಅಮ್ಮ ಅವರು ಸಮಸ ಭಕ್ತರ ಕುರಿತು ವಿಶೇಷ ಆಶೀರ್ವ ಚನ ಮತ್ತು ಸಾಮೂಹಿಕವಾಗಿ ಧ್ಯಾನವನ್ನು ಮಾಡಿಸುವ ಮೂಲಕ ದಿವ್ಯಾನುಭವವನ್ನು ನೀಡಲಿದ್ದಾರೆ. ಎಂದರು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ದೇವಾಲಯ ಸಮಿತಿಯ ಅಧ್ಯಕ್ಷರಾದ ಕೆ ಎಸ್ ಈಶ್ವರಪ್ಪ ನವರು ಇಡೀ ಕುಟುಂಬ ಸಮೇತರಾಗಿ ಉಪಸ್ಥಿತರಿರುವರು. ಎಂದರು.
ಈ ಕಾರ್ಯಕ್ರಮವು ಲೋಕಕಲ್ಯಾಣಾರ್ಥವಾಗಿ ನಡೆಯುತ್ತಿದ್ದು ಭಜನಾ ಮಂಡಳಿಯ ಮಾತೆಯರು ಸಾರ್ವಜನಿಕ ಮಾತೆಯರು ಭಕ್ತಾದಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ ಬೇಕು ಎಂದು ಮನವಿ ಮಾಡಿದರು.
ಮಾತೆಯರು ಸಂಕಲ್ಪ ಕಾಣಿಕೆ ರೂ. 21 ನೀಡಿ ಪ್ರವೇಶ ಪತ್ರ ಪಡೆದು, ಅರ್ಚನೆ ತಟ್ಟೆ, ವಿಳ್ಯ ದೆಲೆ, ಸೇವಂತಿಗೆ ಹೂ, 1 ರೂ. ನಾಣ್ಯ ಹಾಗೂ ಶುದ್ಧ ಕುಂಕುಮ ತರಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ರಾದ,ಕೆ .ಎಸ್. ಈಶ್ವರಪ್ಪ,ವಿನಾಯಕಬಾಯರಿ,ಶಬರೀಶ್ ಕಣ್ಣನ್,ಶ್ರೀಧರ್,ಸ ನಾ ಮೂರ್ತಿ, ವಿ ರಾಜು,ಶುಭ ರಾಘವೇಂದ್ರ,ಪುಷ್ಪಪ್ರಸಾದ,ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post