ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ (ರವೀಂದ್ರ ನಗರ) ನಾದಸುಧಾ ವತಿಯಿಂದ ಆ.೧೧ರ ಭಾನುವಾರ ಸಂಜೆ 6:30ರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ವಿ.ಜೆ.ಬಿ. ಕೀರ್ತನಾ, ಚೆನ್ನೈ ಹಾಡುಗಾರಿಕೆಗೆ, ಹೆಚ್.ವಿ. ರಘರಾಮ್ ಶಿವಮೊಗ್ಗ (ವಯೋಲಿನ್), ಬಿ.ಸಿ. ಮಂಜುನಾಥ್, ಬೆಂಗಳೂರು (ಮೃದಂಗ), ಅಭಿಜಿತ್ ಹರಿಹರಪುರ ಬೆಂಗಳೂರು, (ಘಟಂ) ಇರಲಿದೆ.
ವಿದ್ವಾಂಸರ ಕಿರುಪರಿಚಯ:
ವಿದುಷಿ ಜೆ.ಬಿ. ಕೀರ್ತನ, ಚೆನ್ನೈ. ಕಲೈಮಾಮಣಿ ಡಾ.ಎಸ್. ಸುಂದರ್ ರವರ ಶಿಷ್ಯೆಯಾಗಿದ್ದು, ಸುಮಾರು ಕಳೆದ 18 ವರ್ಷಗಳಿಂದ ಶ್ರೀಯುತರಲ್ಲಿ ತಮ್ಮ ಸಂಗೀತ ಶಿಕ್ಷಣವನ್ನು ಪಡೆದಿರುತ್ತಾರೆ.
ಪ್ರಖ್ಯಾತ ಕೊಳಲು ವಾದಕರಾಗಿರುವ ವಿದ್ವಾನ್ ಶ್ರೀ ಜೆ.ಬಿ. ಶೃತಿಸಾಗರ್ ರವರ ಸಹೋದರಿಯಾಗಿರುವ ವಿದುಷಿ ಕೀರ್ತನರವರು, ಬಯೋಟೆಕ್ನಾಲಜಿಯ ಪದವೀಧರರಾಗಿದ್ದು, ಎಂ.ಎ. ಮ್ಯೂಸಿಕ್ ಸಂಪೂರ್ಣಗೊಳಿಸಿ, ಪ್ರಸ್ತುತ ಸಂಸ್ಕೃತ ಅಧ್ಯಯನವನ್ನು ಮಾಡುತ್ತಿದ್ದಾರೆ.
ಆಕಾಶವಾಣಿಯ ‘ಎ’ ಶ್ರೇಣಿಯ ಕಲಾವಿದೆಯಾಗಿರುವ ವಿದುಷಿ ಕೀರ್ತನರವರು, ಶಂಕರ ಟಿವಿ, ರಾಜ್ ಟಿವಿ, ಮಕ್ಕಳ್ ಟಿವಿ, SUN NEWS ಸೇರಿದಂತೆ ದೂರದರ್ಶನದ ಅನೇಕ ಪ್ರಖ್ಯಾತ ಚಾನಲ್ ಗಳಲ್ಲಿ ತಮ್ಮ ಪ್ರಸ್ತುತಿಯನ್ನು ನಿರಂತರವಾಗಿ ನೀಡುತ್ತಿರುತ್ತಾರೆ.
ಈಗಾಗಲೇ ಹಲವಾರು ಧ್ವನಿಮುದ್ರಿಕೆಗಳನ್ನು ಹೊರತಂದಿರುವ ವಿದುಷಿ ಕೀರ್ತನರವರು, ಪ್ರಸ್ತುತ ಶ್ರೀ ಗೋಪಾಲಕೃಷ್ಣ ಭಾರತಿಯವರ ಹಾಡುಗಳ ಬಗ್ಗೆ 1 ಯೋಜನೆಯನ್ನು ಕೈಗೊಂಡಿದ್ದು, 40 ರಚನೆಗಳನ್ನೊಳಗೊಂಡ ಸಿಡಿಯೊಂದನ್ನು ಚಿದಂಬರಂ ದೇವಸ್ಥಾನದಲ್ಲಿ ಹೊರತರಲಿದ್ದಾರೆ.
ತಮ್ಮ ಗುರುಗಳೊಂದಿಗೆ ಹಲವಾರು ಕಚೇರಿಗಳಲ್ಲಿ ಸಹಗಾಯನವನ್ನು ನೀಡಿರುವ ವಿದುಷಿ ಕೀರ್ತನರವರು, ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ಪ್ರಸ್ತುತಿ ಹಾಗೂ ನಾಮಸಂಕೀರ್ತನೆ ಪ್ರಸ್ತುತಿಯೆರಡರಲ್ಲಿಯೂ ಪ್ರಖ್ಯಾತರಾಗಿದ್ದಾರೆ. ರಮಣ ಕೇಂದ್ರ, ಸಚ್ಚಿದಾನಂದ ಆಶ್ರಮ, ಕಂಚಿ ಮಠ, ನಿತ್ಯಾನಂದ ಸ್ವಾಮಿ ಆಶ್ರಮ, ಬಿಡದಿ ಆಶ್ರಮ, ಕಾರ್ತಿಕ್ ಫೈನ್ ಆರ್ಟ್ಸ್, ಇಂಡಿಯನ್ ಫೈನ್ ಆರ್ಟ್ಸ್, ಪಾರ್ಥಸಾರಥಿ ಸ್ವಾಮಿ ಸಭಾ, ಚಿದಂಬರಂ ದೇವಸ್ಥಾನ, ಕರೂರ್, ಕಾರೈಕುಡಿ, ತಿರುನೇಲ್ವೇಲಿ, ಚೆನ್ನೈನ RR ಸಭಾ, ತ್ಯಾಗ ಬ್ರಹ್ಮಗಾನ ಸಭಾ, ಮುಂಬೈನ ಷಣ್ಮುಖಾನಂದ ಸಭಾ, ಶೃಂಗೇರಿ ಮತ್ತು ಮಂಗಳೂರು ಸಂಗೀತ ಸಭಾ, ಕೊಲ್ಕತ್ತಾದ ರಸಿಕ ರಂಜನಿ ಸಭಾ, ವಿಶಾಖಪಟ್ಟಣದ ಕಲಾಭಾರತಿ ಸೇರಿದಂತೆ ಈಗಾಗಲೇ ದೇಶದಾದ್ಯಂತ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಕಚೇರಿಯನ್ನು ನೀಡಿರುತ್ತಾರೆ.
ಸೆಂಟ್ರಲ್ ಗೌರ್ಮೆಂಟ್ ನ CCRT ಸ್ಕಾಲರ್ಶಿಪ್, ಯಂಗ್ ಅಚೀವರ್ಸ್ ಸ್ಕಾಲರ್ಶಿಪ್ ಗಳನ್ನು ಪಡೆದುಕೊಂಡಿರುವ ವಿದುಷಿ ಕೀರ್ತನರವರಿಗೆ ಚೈಲ್ಡ್ ಪ್ರಾಡಿಜಿ ಅವಾರ್ಡ್, ಯುವಕಲಾಭಾರತಿ ಅವಾರ್ಡ್, ಎಂ ಎಸ್ ಸುಬ್ಬಲಕ್ಷ್ಮಿ ಫೆಲೋಶಿಪ್, ಕೃಷ್ಣಗಾನ ಸಭಾ ದಿಂದ best concert prize, ಹಂಸದ್ವನಿ ವಾರ್ಷಿಕ ಸ್ಪರ್ಧೆಗಳಲ್ಲಿ ಮೊದಲನೇ ಬಹುಮಾನ, ಮ್ಯೂಸಿಕ್ ಅಕಾಡೆಮಿಯ ಅನೇಕ ಸ್ಪರ್ಧೆಗಳಲ್ಲಿ ಮೊದಲ ಬಹುಮಾನ, ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿಯಿಂದ ತಂಬೂರ ಬಹುಮಾನ ಹೀಗೆ ಹಲವಾರು ಸ್ಪರ್ಧೆಗಳಲ್ಲಿ ಮೊದಲ ಬಹುಮಾನಗಳು, ನೂರಾರು ಪ್ರಶಸ್ತಿ-ಪುರಸ್ಕಾರಗಳು ಸಂದಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post