ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಹ್ಯಾದ್ರಿ ಕಲಾ ಕಾಲೇಜಿನ Sahyadri Arts College ವಿದ್ಯಾರ್ಥಿ ಸಾಂಸ್ಕøತಿಕ ವೇದಿಕೆ ಹಾಗೂ ಕ್ರೀಡಾ ವಿಭಾಗಗಳ ಸಮಾರೋಪ ಸಮಾರಂಭವನ್ನು ಆ.12ರ ಬೆಳಿಗ್ಗೆ 10.30ಕ್ಕೆ ಸಹ್ಯಾದ್ರಿ ಕಲಾ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ.
ಕುವೆಂಪು ವಿವಿ ಕುಲಸಚಿವ ಲೋಖಂಡೆ ಸ್ನೇಹಲ್ ಸುಧಾಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಕ್ರೀಡಾಪಟು ಕಾರ್ತಿಕ್ ಕಾಟೆ, ಚಲನಚಿತ್ರ ನಟ ನವೀನ್ ಶಂಕರ್, ನಟಿ ಅರ್ಚನಾ ಜೋಯ್ಸ್ ಭಾಗವಹಿಸಲಿದ್ದಾರೆ.
ಪ್ರಾಂಶುಪಾಲ ಡಾ. ಕೆ.ಟಿ. ಧನಂಜಯ ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರುಗಳಾದ ಡಾ. ಎನ್. ರಾಜೇಶ್ವರಿ, ಡಾ.ಎಂ.ಕೆ. ವೀಣಾ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ. ಚಂದ್ರಪ್ಪ, ಕ್ರೀಡಾ ವಿಭಾಗದ ಸಂಚಾಲಕ ಡಾ. ಕೆ.ಎನ್.ಮಂಜುನಾಥ್, ಐಕ್ಯೂಎಸಿ ಸಂಚಾಲಕ ಪ್ರೊ. ಪೂರ್ವಾಚಾರಿ ಉಪಸ್ಥಿತರಿರುವರು.
Also read: ಲೋಕಸಭೆಯಲ್ಲಿ ರಾಹುಲ್ ಗಾಂಧಿ ‘ಫ್ಲೈಯಿಂಗ್ ಕಿಸ್’ ಹಿನ್ನೆಲೆ: ಸಚಿವೆ ಸ್ಮೃತಿ ಇರಾನಿ ಆಕ್ರೋಶ
ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕ್ಷೇಮಾಧಿಕಾರಿ ಕೋರಿದ್ದಾರೆ.



ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















