ಸಂವಾದದಲ್ಲಿ ಮುದ್ರಣ ಕ್ಷೇತ್ರದ ಸವಾಲು ಮತ್ತ ಪರಿಹಾರ, ಆಧುನಿಕ ತಂತ್ರಜ್ಞಾನ ಅಳವಡಿಕೆ, ಜಿಲ್ಲಾ ಮಟ್ಟದಲ್ಲಿ ಮುದ್ರಣ ಕೈಗಾರಿಕೆ ಕ್ಲಸ್ಟರ್ ಸ್ಥಾಪಿಸುವ ಬಗ್ಗೆ ವಿಚಾರ ವಿನಿಮಯ, ರಾಜ್ಯ ಸಂಘದಿಂದ ನಿರೀಕ್ಷಿಸುವ ಸವಾಲುಗಳು ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
Also read: ಸಿದ್ದಯ್ಯಗೆ ಬೆಂಗಳೂರು ವಿಶ್ವವಿದ್ಯಾಲಯ ಪಿಹೆಚ್‌ಡಿ ಪ್ರದಾನ
ಸಂವಾದವು ಮುದ್ರಣ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ನಡೆಯಲಿದ್ದು, ಮುದ್ರಕರು ತಮ್ಮ ಅಮೂಲ್ಯವಾದ ಪ್ರಶ್ನೆ, ಪರಿಹಾರ, ಮಾರ್ಗೋಪಾಯ, ಸಮಸ್ಯೆಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಉತ್ತಮ ಸಲಹೆಗಳನ್ನು ನೀಡುವ ಐವರು ಮುದ್ರಕರಿಗೆ ಬಹುಮಾನ ನೀಡಲಾಗುವುದು ಎಂದರು.
ಜಿಲ್ಲಾ ವಾಣಿಜ್ಯ ವತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಉದ್ಘಾಟಿಸಲಿದ್ದು, ಅಖಿಲ ಭಾರತ ಮುದ್ರಣಕಾರರ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಪ್ರಿಂಟಿಂಗ್ ಪಾರ್ಕ್ ಕ್ಲಸ್ಟರ್‍ನ ಅಧ್ಯಕ್ಷ ಸಿ.ಆರ್.ಜನಾರ್ಧನ್, ರಾಜ್ಯ ಮುದ್ರಣಕಾರರ ಸಂಘದ ಅಧ್ಯಕ್ಷ ಬಿ.ಆರ್. ಅಶೋಕ್‍ಕುಮಾರ್, ರಾಜ್ಯ ಮುದ್ರಣಕಾರರ ಸಮನ್ವಯ ಸಮಿತಿ ಸಂಚಾಲಕ ಎಂ. ಮಹೇಶ್‍ಕುಮಾರ್, ದಾವಣಗೆರೆ ಡಿವಿಜನ್ ಸಂಚಾಲನಾ ಸಮಿತಿ ಉಪಾಧ್ಯಕ್ಷ ಎ.ಎಂ. ಪ್ರಕಾಶ್ ವಿಷಯತಜ್ಞರಾಗಿ ಭಾಗವಹಿಸಲಿದ್ದಾರೆ ಎಂದರು.
ಸಂಘದ ಕಾರ್ಯದರ್ಶಿ ಗಣೇಶ್‍ಬಿಳಗಿ ಮಾತನಾಡಿ, ಪ್ರಬಲ ಪೈಪೋಟಿ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆ, ಮುದ್ರಣ ಸಾಮಗ್ರಿ ಹಾಗೂ ವಿದ್ಯುತ್ ದರ ಏರಿಕೆ, ಕಾರ್ಮಿಕರ ಕೊರತೆಯಿಂದಾಗಿ ಸಣ್ಣ ಸಣ್ಣ ಮುದ್ರಣಾಲಯಗಳು ಮುಚ್ಚುವ ಹಂತ ತಲುಪಿದ್ದು, ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಸಂವಾದ ಹಮ್ಮಿಕೊಳ್ಳಲಾಗಿದೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








