ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಬೆಳ್ಳಿಮಂಡಲ, ಯುಗಧರ್ಮ ಜಾನಪದ ಸಮಿತಿ ಹಾಗೂ ಸಿನಿಮೊಗೆ – ಶಿವಮೊಗ್ಗ ಚಿತ್ರ ಸಮಾಜಗಳ ಸಂಯುಕ್ತ ಆಶ್ರಯದಲ್ಲಿ ಐದನೇ ವರ್ಷದ ಅಂಬೆಗಾಲು – 5 ಕಿರುಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಫೆ.12ರಂದು ಸಉವರ್ಣ ಸಂಸ್ಕೃತಿ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ಬಹುಮಾನ ವಿತರಣೆ ಸಮಾರಂಭ ಹಮ್ಮಿಕೊಳ್ಳಲಾಗುವುದು ಎಂದು ಬೆಳ್ಳಿಮಂಡಲದ ಕಾರ್ಯಾಧ್ಯಕ್ಷರು ಹಾಗೂ ಅಂಬೆಗಾಲು ಕಿರುಚಿತ್ರ ಸ್ಪರ್ಧೆಯ ಸಂಚಾಲಕ ಆದ ಡಿ.ಎಸ್. ಅರುಣ್ ತಿಳಿಸಿದರು.
ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಲ್ಲಿ ನಡೆದ ಅಂಬೆಗಾಲು ಕಿರುಚಿತ್ರ ಸ್ಪರ್ಧೆಗಳಲ್ಲಿ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಕ್ರಿಯಾಶೀಲ ನಿರ್ದೇಶಕರು, ತಂತ್ರಜ್ಞರು ಪಾಲ್ಗೊಂಡು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಹೆಮ್ಮೆಯ ಸಂಗತಿ. ಈ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪುರಸ್ಕೃತರಾದ ಘನ್ಮಂಡ್ರಿ ಕ್ರಾಸ್, ಹೆಕ್ಕೆಮನೆ, ಚೌಕಿ, ಅನಲಾ, ಕುರ್ಲಿ, ದಾಳಿ, ಭ್ರಾಂತು, ಖೇಜ್, ಕಲಾಂ ಹಿಂದೂಸ್ಥಾನಿ, ಬ್ಲೌಸ್, ನೊಂದವರ ಯುವಕರು ಸಂಘ, ದೂರದರ್ಶನ, ಸೌಮ್ಯ ಮೊದಲಾದ ಪ್ರಶಸ್ತಿ ಪುರಸ್ಕೃತ ಚಿತ್ರಗಳು ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದೆಯಲ್ಲದೇ, ಅನೇಕ ಚಿತ್ರೋತ್ಸವಗಳಲ್ಲಿಯೂ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ ಎಂದರು.
ಯುವಜನತೆಯಲ್ಲಿ ಚಲನಚಿತ್ರ ಕುರಿತಾಗಿ ಅರಿವು ಮೂಡಿಸುವ ಹಾಗೂ ಅವರಲ್ಲಿನ ಸೃಜನಶೀಲತೆಯನ್ನು ಪ್ರೊತ್ಸಾಹಿಸುವ ದೃಷ್ಟಿಯಿಂದ ಈ ಬಾರಿ 14 ರಿಂದ 10 ನಿಮಿಷಗಳ ಈ ಕಿರುಚಿತ್ರ ಸ್ಪರ್ಧೆಯನ್ನು ಅಯೋಜಿಸಲಾಗಿದ್ದು, ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ನಲವತ್ತು ಕಿರು ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರು, ಕಲಾವಿದರು ತೀರ್ಪುಗಾರರಾಗಿ ಪಾಲ್ಗೊಂಡು 14 ಚಿತ್ರಗಳನ್ನು ಅಂತಿಮ ಸುತ್ತಿನಲ್ಲಿ ಆಯ್ಕೆ ಮಾಡಿದ್ದು, ಈ ಚಿತ್ರಗಳನ್ನು ಬಹುಮಾನ ವಿತರಣೆಗೂ ಮುನ್ನ ಪ್ರದರ್ಶಿಸಲಾಗುವುದು. ಪ್ರಶಸ್ತಿ ಪುರಸ್ಕೃತ ಚಿತ್ರಗಳಿಗೆ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು ಎಂದರು.
Also read: ಇತಿಹಾಸವನ್ನು ತಿರುಚಿ ಹೇಳುವ ಅಗತ್ಯ ನನಗಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ರೂ. 25,000ರೂ.ಗಳ ಪ್ರಥಮ ಬಹುಮಾನ, ರೂ. 15,000 ರೂ.ಗಳ ದ್ವಿತೀಯ ಹಾಗೂ 10,000 ರೂ. ಗಳ ತೃತೀಯ ಬಹುಮಾನಗಳ ಜೊತೆಗೆ ಶ್ರೇಷ್ಠ ನಟ, ಶ್ರೇಷ್ಠ ನಟಿ, ಶ್ರೇಷ್ಠ ನಿರ್ದೇಶಕ, ಶ್ರೇಷ್ಠ ಕಥೆ-ಚಿತ್ರಕಥೆ, ಶ್ರೇ? ಛಾಯಾಗ್ರಹಣ, ಶ್ರೇಷ್ಠ ಸಂಗೀತ, ವಿಭಾಗಗಳಲ್ಲಿ ಆಕರ್ಷಣೀಯ ಸರಣಿಕೆಗಳಿವೆ ಎಂದರು.
ಸತ್ಯ, ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಅನ್ಲಾಕ್’ ರಾಘವ ಚಿತ್ರದ ಟೀಸರ್ ಬಿಡುಗಡೆ ಕೂಡಾ ನಡೆಯಲಿದ್ದು, ನಿರ್ದೇಶಕ ದೀಪಕ್ ಮಧುವನಹಳ್ಳ್ಳಿ, ರಾಜ್ಯ ಪ್ರಶಸ್ತಿ ಪರಸ್ಕೃತ ನಿರ್ದೇಶಕ ಡಿ. ಸತ್ಯಪ್ರಕಾಶ್, ಚಲನಚಿತ್ರ ಕಲಾವಿದ ನಟರಾಜ ಎಸ್. ಭಟ್, ಮಯೂರ ಮೋ?ನ್ಸ್ ಪಿಕ್ಚರ್ಸ್ನ ನಿರ್ಮಾಪಕ ಡಿ.ಮಂಜುನಾಥ್, ನಾಯಕ ನಟ ಮಿಲಿಂದ್, ಧರ್ಮ ಕಡೂರು ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವೈದ್ಯ, ಜಿ. ವಿಜಯಕುಮಾರ್, ಚೇತನ್, ಆನಂದ, ಚಂದ್ರಶೇಖರ್, ಶಿವಾನಂದ್, ಕಿರಣ್, , ಮಂಜುನಾಥ್, ರಘುನಂದನ್ಮೊದಲಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post