ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇತ್ತೀಚೆಗಷ್ಟೇ ಅಕಾಲಿಕ ನಿಧನ ಹೊಂದಿದ ಶಿವಮೊಗ್ಗದ ಖ್ಯಾತ ಯುವ ಉದ್ಯಮಿ ಶರತ್ ಭೂಪಾಳಂ ಹಾಗೂ ಸರ್ಜಿ ತಾಯಿ ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾಗಿದ್ದ ಡಾ.ಹೆಚ್.ಎಸ್. ಸತೀಶ್ ಅವರ ಸ್ಮರಣಾರ್ಥ ರೌಂಡ್ ಟೇಬಲ್ಸ್ ಆಫ್ ಶಿವಮೊಗ್ಗ ಹಾಗೂ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಫೆ.19ರ ಭಾನುವಾರ ಬೆಳಗ್ಗೆ ಮ್ಯಾರಥಾನ್ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಖ್ಯಾತ ಯುವ ಉದ್ಯಮಿ ಶರತ್ ಭೂಪಾಳಂ ಅವರ ಸ್ಮರಣಾರ್ಥ ಅಂದು ಬೆಳಗ್ಗೆ 6 ಗಂಟೆಗೆ ಜೈಲ್ ರಸ್ತೆಯ ಫ್ರೀಡಂ ಪಾರ್ಕ್ ಆವರಣದಿಂದ ಶಿವಮೊಗ್ಗ ರನ್ ಹೆಸರಿನಲ್ಲಿ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ. ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರವನ್ನು ನೀಡಲಾಗುವುದು. ಮೊದಲು ನೋಂದಾಯಿಸಿದ 100 ಮಂದಿಗೆ ಉಚಿತವಾಗಿ ಟೀ ಶರ್ಟ್ ನೀಡಲಾಗುವುದು, ಅಲ್ಲದೇ ಸಸಿಗಳನ್ನು ವಿತರಿಸಲಾಗುವುದು.
Also read: ಅಕ್ರಮ ನಾಟ ಸಾಗಟ ಪತ್ತೆ ಹಚ್ಚಿದ ಎಸಿಎಫ್ ಪ್ರವೀಣ್ ಕುಮಾರ್ ಬಸ್ರೂರ್: ಸಾರ್ವಜನಿಕರಿಂದ ಪ್ರಶಂಸೆ

ನೂರು ರೂಪಾಯಿ ಪ್ರವೇಶ ಶುಲ್ಕವಿದೆ. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ 7406667848 ಅಥವಾ 7406667849 ನಂಬರ್‌ಗೆ ಸಂಪರ್ಕಿಸಬಹುದು.












Discussion about this post