ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಭಿರುಚಿ ಸಾಂಸ್ಕೃತಿಕ ವೇದಿಕೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಫೆ.24ರಂದು ಬೆಳಿಗ್ಗೆ 10:30ಕ್ಕೆ ಕುವೆಂಪು ರಂಗಮಂದಿರದಲ್ಲಿ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅಭಿರುಚಿ ವೇದಿಕೆ ಅಧ್ಯಕ್ಷ ಡಾ. ಎ. ಶಿವರಾಮಕೃಷ್ಣ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ವಚ್ಛ ಶಿವಮೊಗ್ಗ, ಸುಂದರ ನಗರ- ಅಭಿರುಚಿ ನಡಿಗೆ ಸ್ವಚ್ಛತೆಯೆಡೆಗೆ ಯೋಜನೆ ಅಡಿಯಲ್ಲಿ ಜಲಸಂರಕ್ಷಣೆ -ನಮ್ಮೆಲ್ಲರ ಹೊಣೆ ಕುರಿತು ಕಾಲ್ನಡಿಗೆ ಜಾಥಾ ಮತ್ತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳು, ನಾಗರಿಕರು ಇದರಲ್ಲಿ ಭಾಗವಹಿಸುವರು ಎಂದರು.
ಸಂವಾದ ಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ 9:30ಕ್ಕೆ ಬಿ.ಹೆಚ್ ರಸ್ತೆಯಲ್ಲಿರುವ ಸರ್ಕಾರಿ ಬಾಲಿಕಾ ಪ್ರೌಢಶಾಲೆ ಆವರಣದಿಂದ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್ ಇದಕ್ಕೆ ಚಾಲನೆ ನೀಡುವರು. ಈ ಜಾಥಾವು ಬಿಹೆಚ್.ರಸ್ತೆ, ನೆಹರು ರಸ್ತೆ, ಮಹಾವೀರ ವೃತ್ತದ ಮೂಲಕ ಕುವೆಂಪು ರಂಗಮಂದಿರ ತಲುಪಲಿದೆ. ನಂತರ ಅಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದರು.
ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಉದ್ಘಾಟಿಸುವರು. ಕುವೆಂಪು ವಿವಿ ಕುಲಸಚಿವ ಪ್ರೊ. ನವೀನ್‌ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಜಲಸಂರಕ್ಷಣೆ ತಜ್ಞ ಹಾಗೂ ರಾಜ್ಯಪ್ರಶಸ್ತಿ ವಿಜೇತ ಶಿವಾನಂದ ಕಳವೆ ವಿಶೇಷ ಉಪನ್ಯಾಸ ನೀಡುವರು. ಅಭಿರುಚಿಯ ಗೌರವಾಧ್ಯಕ್ಷ ಡಾ. ಎ. ವೆಂಕಟರಾಜು ಉಪಸ್ಥಿತರಿರುವರು ಎಂದರು.
ಇತ್ತೀಚಿನ ದಿನಗಳಲ್ಲಿ ಪರಿಸರದ ಸಾಕ್ಷರತೆಯ ಅರಿವುಮೂಡುತ್ತಿಲ್ಲ. ಶುದ್ಧ ಕುಡಿಯುವ ನೀರು ಮತ್ತು ಉಸಿರಾಡುವ ಗಾಳಿಯನ್ನೂ ಕೊಂಡುಕೊಳ್ಳುವ ಸ್ಥಿತಿ ಬಂದಿದೆ. ಈ ಬಗ್ಗೆ ಜಾಗೃತಿ ಮೂಡಬೇಕಾಗಿದೆ. ಮುಖ್ಯವಾಗಿ ಯುವ ಸಮುದಾಯದಲ್ಲಿ ಪರಿಸರ ಪ್ರಜ್ಞೆ ಬೆಳೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶಿವಾನಂದ ಕಳವೆ ಅವರು `ಕ್ಷಾಮ ಡಂಗುರ’ ಎಂಬ ಸ್ಲೈಡ್ ಪ್ರದರ್ಶನಕ್ಕೂ ಕೂಡ ಚಾಲನೆ ನೀಡುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಹ್ಯಾದ್ರಿ ಕಾಲೇಜಿನ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ನಾಗರಾಜ್ ಪರಿಸರ ಹಾಗೂ ಪ್ರಮುಖರಾದ ಮಹಾದೇವ ಸ್ವಾಮಿ, ಕುಮಾರಸ್ವಾಮಿ, ರವಿಚಂದ್ರ ನಾಯ್ಕ, ತಿಪ್ಪಣ್ಣ, ಶಾಲಿನಿ ರಾಮಸ್ವಾಮಿ, ಪ್ರಕಾಶ್ ಇದ್ದರು.
ಹೊಸೂಡಿ ಶ್ರೀ ವೀರಭದ್ರಸ್ವಾಮಿ ಶತರುದ್ರಾಭಿಷೇಕ ಮತ್ತು ರುದ್ರಹೋಮ ಕಾರ್ಯಕ್ರಮ
ಶಿವಮೊಗ್ಗ ಸಮೀಪದ ಹೊಸೂಡಿ ಶ್ರೀ ವೀರಭದ್ರಸ್ವಾಮಿಗೆ ಪ್ರತಿ ವರ್ಷದಂತೆ ಇದೇ ಫೆ.24ರಂದು ಶತರುದ್ರಾಭಿಷೇಕ ಮತ್ತು ರುದ್ರಹೋಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರುದ್ರಾಭಿಷೇಕಕ್ಕೆ ಮತ್ತು ರುದ್ರಹೋಮಕ್ಕೆ ಒಟ್ಟೂ 200ರೂ. ನಿಗದಿ ಮಾಡಲಾಗಿದ್ದು ಭಕ್ತಾದಿಗಳು ಹಣ ಪಾವತಿಸಿ ಸೇವಾ ಚೀಟಿ ಪಡೆಯಲು ವಿನಂತಿಸಲಾಗಿದೆ. ಭಕ್ತಾದಿಗಳು ಸ್ವಾಮಿ ಅಭಿ?ಕಕ್ಕೆ ಹೂವು, ಹಾಲು, ಹಣ್ಣು, ಎಳನೀರು ಮತ್ತು ತೆಂಗಿನ ಕಾಯಿಗಳನ್ನು ಕೊಟ್ಟು ಶ್ರೀ ಸ್ವಾಮಿಯ ಕೃಪೆಗೆ ಕೋರಲಾಗಿದೆ.
ಶ್ರೀ ಸ್ವಾಮಿಯ ಅಪ್ಪಣೆ ಮೇರೆಗೆ ದೇವಸ್ಥಾನದ ಜೀರ್ಣೋದ್ಧಾರದ ಕಲ್ಲಿನ ಕೆತ್ತನೆ ಕಾರ್ಯ ನಡೆಯುತ್ತಿದ್ದು, ಭಕ್ತಾದಿಗಳು ಈ ಸತ್ಕಾರ್ಯಕ್ಕೆ ಉದಾರವಾದ ಸಹಾಯ ಮಾಡಬೇಕೆಂದು ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಸೇವಾ ಸಮಿತಿ ಕೋರಿದೆ.
ದಾನಿಗಳು ತಮ್ಮ ದೇಣಿಗೆಯನ್ನು ಹೊಸೂಡಿ ಕೆನರಾ ಬ್ಯಾಂಕ್ ಶಾಖೆಯ ಖಾತೆ ಸಂಖ್ಯೆ 3795101000001ಕ್ಕೆ ಜಮಾ ಮಾಡುವಂತೆ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಮೊ.9900255327, 9844536601 ಸಂಖ್ಯೆಯನ್ನು ಸಂಪರ್ಕಿಸಲು ದೇವಸ್ಥಾನದ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post