ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಜೇಯ ಸಂಸ್ಕøತಿ ಬಳಗದ ವತಿಯಿಂದ ಫೆ.4 ಮತ್ತು 5ರಂದು ಕುವೆಂಪು ರಂಗಮಂದಿರದಲ್ಲಿ ‘ಎಲ್ಲೆಲ್ಲೂ ಸಂಗೀತವೇ’ ಶೀರ್ಷಿಕೆಯಡಿ ಶಾಸ್ತ್ರೀಯ ಸಂಗೀತ ರಾಗಾಧಾರಿತ ಭಕ್ತಿ-ಭಾವ-ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಕಾರ್ಯದರ್ಶಿ ಆರ್.ಅಚ್ಯುತರಾವ್ ತಿಳಿಸಿದರು.
ಅವರು ಇಂದು ಮೀಡಿಯಾ ಹೌಸ್‍ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಫೆ.4ರ ಸಂಜೆ 6 ಗಂಟೆಗೆ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಸಮಾರಂಭ ಉದ್ಘಾಟಿಸುವರು. ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶೃಂಗೇರಿ ಹೆಚ್.ಎಸ್.ನಾಗರಾಜ್ ಉಪಸ್ಥಿತರಿರುವರು. ಬಳಗದ ಅಧ್ಯಕ್ಷ ಜೆ.ರಾಮಾಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.


ಫೆ.5ರ ಸಂಜೆ 7.30ಕ್ಕೆ ಧಾರ್ಮಿಕ ಶಿಕ್ಷಣ ಪ್ರಚಾರ ಹಾಗೂ ಕ್ಯಾನ್ಸರ್ ರೋಗಿಗಳಿಗೆ ಸರ್ವ ಸಹಕಾರದ ಉದ್ದೇಶದಿಂದ ಸ್ಥಾಪಿಸಲ್ಪಡುತ್ತಿರುವ ಸುಗುಣ ಮೆಮೋರಿಯಲ್ ಟ್ರಸ್ಟ್‍ನ್ನು ಬೆಂಗಳೂರಿನ ಬಿ.ಗುರುರಾಜ ರಾವ್ ಉದ್ಘಾಟಿಸುವರು. ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಾಗೂ ಸುಗುಣ ಮೆಮೋರಿಯಲ್ ಟ್ರಸ್ಟ್ ಆರಂಭಿಸುತ್ತಿರುವ ಬಳಗದ ಅಧ್ಯಕ್ಷರಾದ ಜೋಯಿಸ್ ರಾಮಾಚಾರ್ ಇವರನ್ನು ಅಮೃತ್‍ನೋನಿ ಮುಖ್ಯಸ್ಥ ಎ.ಕೆ.ಶ್ರೀನಿವಾಸಮೂರ್ತಿ ಹಾಗೂ ಸಂಡೂರು ಪಾಲಿಟೆಕ್ನಿಕ್ ಕಾಲೇಜಿನ ಹಿರಿಯ ಗಣಿತ ಉಪನ್ಯಾಸಕ ಎಸ್. ಪಾಂಡುರಂಗರಾವ್ ಅವರನ್ನು ಸನ್ಮಾನಿಸಲಿದ್ದಾರೆ ಎಂದರು.
ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶೃಂಗೇರಿ ಹೆಚ್.ಎಸ್.ನಾಗರಾಜ್ ಮಾತನಾಡಿ, ಶಾಸ್ತ್ರೀಯ ಸಂಗೀತ ಕೇಳುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಥಮ ಹಾಗೂ ವಿಭಿನ್ನ ಪ್ರಯೋಗವಾಗಿ ಮೋಹನರಾಗ ಬಳಸಿ ಶಾಸ್ತ್ರೀಯ, ಲಘು, ಭಾವಗೀತೆ ಹಾಗೂ ಚಿತ್ರಗೀತೆಗಳ ಗಾಯನ ‘ಎಲ್ಲೆಲ್ಲೂ ಸಂಗೀತವೇ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.


ಪ್ರತಿದಿನ ಸಂಜೆ 6 ಗಂಟೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಾದ ಎ.ಎನ್.ಎಸ್.ಕಿರಣ್, ಸುರೇಖಾ ಹೆಗ್ಡೆ, ಕೃಪಾ ಶ್ರೀಕಾಂತ್, ಪಿ.ಎಸ್.ಮಹತಿಭಟ್, ಮಹತೀ ನಾಗೇಂದ್ರ, ಬಿ.ಜೆ.ಹರಿ, ಸಿಂಚನಮೂರ್ತಿ, ಚಾರ್ಮಿ ಮುರುಳೀಧರ್, ಚಿನ್ಮಯಿನಾಗೇಂದ್ರ ಭಾಗವಹಿಸುತ್ತಿದ್ದು, ಚಿಕಿತ್ಸಾ ವಿಧಾನದಲ್ಲಿ ರಾಗಗಳ ಬಳಕೆ ಕುರಿತು ಡಾ.ರಂಜನಿ ಬಿದರಳ್ಳಿ ವಿವರಣೆ ನೀಡಲಿದ್ದಾರೆ ಎಂದರು.
ವಾದ್ಯಗಾರರಾದ ಮೆಲ್ವಿನ್ ಹಾಗೂ ಅಜಯ್ ಕೀಬೋರ್ಡ್‍ನ್ನು ವಿಠಲ ರಂಗಧೋಳ್ ತಬಲ, ರಾಮು ರಂಗಧೋಳ್ ರಿದಂಪ್ಯಾಡ್‍ನ್ನು ನುಡಿಸಲಿದ್ದಾರೆ. ಪರಿಕಲ್ಪನೆ ಮತ್ತು ನಿರ್ವಹಣೆಯನ್ನು ನಾನು ನಿರ್ವಹಿಸುತ್ತಿದ್ದೇನೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಬಳಗದ ಉಪಾಧ್ಯಕ್ಷ ಎಸ್.ನಾಗೇಶ್, ನಿರ್ದೇಶಕರಾದ ಕೆ.ಜೆ. ಕುಮಾರಸ್ವಾಮಿ, ಡಾ.ರಂಜನಿ ಬಿದರಳ್ಳಿ, ಡಾ.ಚಿತ್ರಲೇಖ, ಹರಿಕಾರ್ಣಿಕ್, ಓಂ ಗಣೇಶ್, ಚೇತನ್ ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















