ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಜೇಯ ಸಂಸ್ಕೃತಿ ಬಳಗ ಇದರ ವತಿಯಿಂದ ಜ.19ರಂದು ಭಾನುವಾರ ಬೆಳಿಗ್ಗೆ 8 ರಿಂದ ರಾತ್ರಿ 8ರವರೆಗೆ ನಗರದ ಕರ್ನಾಟಕ ಸಂಘ ಭವನದಲ್ಲಿ ಅಮ್ಮ ಎಂಬ ಶೀರ್ಷಿಕೆಯಡಿ ಅಮ್ಮ ಎಂಬ ಅಚ್ಚರಿಗೊಂದು ಅಕ್ಕರೆಯ ನಮನ ಕಾರ್ಯಕ್ರಮ ನಡೆಯಲಿದೆ ಎಂದು ಬಳಗದ ನಿರ್ದೇಶಕಿ ಸಹನಾ ಚೇತನ್ ಹೇಳಿದ್ದಾರೆ.
ಅವರು ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಜ.19ರಂದು ಭಾನುವಾರದಂದು ಬೆಳಿಗ್ಗೆ 8ಕ್ಕೆ ನೊಂದಣಿ ಮತ್ತು ಉಪಹಾರ, 8.45ಕ್ಕೆ ಸ್ವಾಗತ ಮತ್ತು ಪ್ರಸ್ತಾವನೆ, 9ಕ್ಕೆ ವೀಣಾ ಬನ್ನಂಜೆ ಅವರಿಂದ ಮಾತೃ ಲಹರಿ, 9.45ಕ್ಕೆ ಭಾವಲಹರಿ ಕಾರ್ಯಕ್ರಮ ನಡೆಯಲಿದ್ದು, 9.50ಕ್ಕೆ ಪರಸ್ಪರ ಪರಿಚಯ, 10.15ಕ್ಕೆ ರಾಮಾಯಣ ಮಹಾಭಾರತದ ಅವಿಸ್ಮರಣೀಯ ತಾಯಿ ವ್ಯಕ್ತಿಚಿತ್ರಗಳು ಎಂಬ ಶೀರ್ಷಿಕೆಯಡಿ ಜಗದೀಶ್ ಶರ್ಮಾ ಸಂಪ ಅವರಿಂದ ಉಪನ್ಯಾಸ ನಡೆಯಲಿದೆ ಎಂದರು.

Also read: ನಕಲಿ ಕಾರ್ಮಿಕ ಕಾರ್ಡ್ ರದ್ದು | ಅಗತ್ಯ ಕ್ರಮಕ್ಕೆ ಸಚಿವ ಸಂತೋಷ್ ಲಾಡ್ ಸೂಚನೆ
ವಿಶೇಷವಾಗಿ 1ಕ್ಕೆ ಊಟದ ಸಮಯದಲ್ಲಿ ಹಿರಿಯ ತಾಯಂದಿರು ಕೈ ತುತ್ತು ನೀಡಲಿದ್ದಾರೆ. 2ಕ್ಕೆ ತಾಯಿಯ ಬಗ್ಗೆ ಅಭಿಪ್ರಾಯ-ಅಭಿಮತ ಮಾತುಕತೆ ನಡೆಯಲಿದ್ದು, ಮೂರಕ್ಕೆ ಅಭಿವ್ಯಕ್ತಿ ಮಾತೃ ಸಂವೇಧನೆಯ ಕಿರುಚಿತ್ರಗಳ ಪ್ರದರ್ಶನ, 3.45ಕ್ಕೆ ವಸುದೇಂದ್ರ ಅವರ ನನ್ನಮ್ಮ ಅಂದರೆ ನಂಗಿಷ್ಟ ಪುಸ್ತಕ ಬಿಡುಗಡೆ ಮತ್ತು ಕಥಾವಾಚನ ನಡೆಯಲಿದೆ. ಸಂಜೆ 5.30ಕ್ಕೆ ಪ್ರಸಾದ್ ಭಾರದ್ವಾಜ್-ಧೀಮಂತ್ ಭಾರದ್ವಾಜ್ ಅವರಿಂದ ಗಮಕದಲ್ಲಿ ಮಾತೃ ಸಂವೇಧನೆ ಕಾರ್ಯಕ್ರಮವಿದ್ದು, ಸಂಜೆ 6ಕ್ಕೆ ಸಹನಾ ಚೇತನ್ ಅವರಿಂದ ಲಾಲಿ ಎಂಬ ದೇವಭಾಷೆ ಭಾವಾಭಿನಯ. 6.30ಕ್ಕೆ ವಿಜ್ಞೇಶ್ ಭಟ್ ಅವರಿಂದ ಭಾರತೀಯ ಸಂಸ್ಕøತಿಯಲ್ಲಿ ಮಾತೃ ಆರಾಧನೆ ಉಪನ್ಯಾಸ, 7.15ಕ್ಕೆ ಸಾಂಸ್ಕøತಿಕ ಕಾರ್ಯಕ್ರಮ 8.15ಕ್ಕೆ ಭೋಜನ ವ್ಯವಸ್ಥೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ 100 ರೂ.ಗಳ ನೊಂದಣಿ ಶುಲ್ಕವಿದ್ದು, ನೊಂದಣಿಗಾಗಿ ಮತ್ತೆ ಹೆಚ್ಚಿನ ವಿವರಗಳಿಗೆ 8310876277, 9844153534, 9448458457, 9844434598 ಇವರನ್ನು ಸಂಪರ್ಕಿಸಬಹುದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post