ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಠಿತ ಜೈನ್ ಪಬ್ಲಿಕ್ ಶಾಲೆಯಲ್ಲಿ ಪೋಷಕರಿಗಾಗಿ ಫನ್ ಫೆಸ್ಟ್ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪೋಷಕರ ಪ್ರತಿಭಾನ್ವೇಷಣೆಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಫನ್ ಫೆಸ್ಟ್’ನಲ್ಲಿ ನೃತ್ಯ, ಹಾಡು, ಸಮೂಹ ನೃತ್ಯ, ಸಂಗೀತ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

Also read: ವಿಐಎಸ್‌ಎಲ್ ಮುಚ್ಚಲು ಬಿಡುವುದಿಲ್ಲ: ಕಾಂಗ್ರೆಸ್ ಮುಖಂಡರ ಭರವಸೆ
ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಸಂಯೋಜಕಿ ದಿವ್ಯಾ ಶೆಟ್ಟಿ, ಸಾಮಾನ್ಯವಾಗಿ ಮಕ್ಕಳಿಗೆ ಪ್ರತಿಭಾನ್ವೇಷಣೆಗೆ ವೇದಿಕೆಗಳು ದೊರೆಯುತ್ತವೆ. ಆದರೆ, ಪೋಷಕರಿಗೆ ಇಂತಹ ಅವಕಾಶಗಳು ಇರುವುದಿಲ್ಲ. ಹೀಗಾಗಿ, ಪೋಷಕರಿಗೆ ಒಂದು ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಫನ್ ಫೆಸ್ಟ್ ಮೂಲಕ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.

ಮಕ್ಕಳೇ ಸ್ವತಃ ತಯಾರಿಸಿದ ತರಹೇವಾರಿ ತಿನಿಸು ಹಾಗೂ ಪಾನೀಯಗಳನ್ನು ಸ್ಟಾಲ್’ಗಳಲ್ಲಿರಿಸಿ ಮಾರಾಟ ಮಾಡಿದರು.
ಕಾರ್ಯಕ್ರಮದಲ್ಲಿ ಜೈನ್ ಪಬ್ಲಿಕ್ ಶಾಲೆಯ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಪೋಷಕರು ತಮಗಾಗಿ ಆಯೋಜಿಸಲಾಗಿದ್ದ ರ‍್ಯಾಂಪ್ ವಾಕ್’ನಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.











Discussion about this post