ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಠಿತ ಜೈನ್ ಪಬ್ಲಿಕ್ ಶಾಲೆಯಲ್ಲಿ ಪೋಷಕರಿಗಾಗಿ ಫನ್ ಫೆಸ್ಟ್ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪೋಷಕರ ಪ್ರತಿಭಾನ್ವೇಷಣೆಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಫನ್ ಫೆಸ್ಟ್’ನಲ್ಲಿ ನೃತ್ಯ, ಹಾಡು, ಸಮೂಹ ನೃತ್ಯ, ಸಂಗೀತ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಪೋಷಕರಿಗಾಗಿ ಮಿಸ್ಟರ್ ಜೆಪಿಎಸ್ ಹಾಗೂ ಮಿಸೆಸ್ ಜೆಪಿಎಸ್ ರ್ಯಾಂಪ್ ವಾಕ್ ಆಯೋಜಿಸಲಾಗಿತ್ತು. ಇದರೊಟ್ಟಿಗೆ ಲಕ್ಕಿ ಡ್ರಾ ಸಹ ನಡೆಯಿತು.
Also read: ವಿಐಎಸ್ಎಲ್ ಮುಚ್ಚಲು ಬಿಡುವುದಿಲ್ಲ: ಕಾಂಗ್ರೆಸ್ ಮುಖಂಡರ ಭರವಸೆ
ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಸಂಯೋಜಕಿ ದಿವ್ಯಾ ಶೆಟ್ಟಿ, ಸಾಮಾನ್ಯವಾಗಿ ಮಕ್ಕಳಿಗೆ ಪ್ರತಿಭಾನ್ವೇಷಣೆಗೆ ವೇದಿಕೆಗಳು ದೊರೆಯುತ್ತವೆ. ಆದರೆ, ಪೋಷಕರಿಗೆ ಇಂತಹ ಅವಕಾಶಗಳು ಇರುವುದಿಲ್ಲ. ಹೀಗಾಗಿ, ಪೋಷಕರಿಗೆ ಒಂದು ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಫನ್ ಫೆಸ್ಟ್ ಮೂಲಕ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.
ನಮ್ಮ ಶಾಲೆಯ ಮಕ್ಕಳಿಗೆ ವ್ಯಾವಹಾರಿಕ ಜ್ಞಾನ ಕಲಿಸುವ ಸಲುವಾಗಿ ಫುಡ್ ಫೆಸ್ಟ್ ಸಹ ಆಯೋಜಿಸಲಾಗಿದ್ದು, ಈ ಮೂಲಕ ಎಲ್ಲ ವಸ್ತುಗಳನ್ನು ಅವರೇ ತಂದು ತಿನಿಸು ತಯಾರಿಸಿ ಅವರೇ ಸ್ವತಃ ಮಾರಾಟ ಮಾಡಲಾಗುತ್ತಿದೆ ಎಂದರು.
ಮಕ್ಕಳೇ ಸ್ವತಃ ತಯಾರಿಸಿದ ತರಹೇವಾರಿ ತಿನಿಸು ಹಾಗೂ ಪಾನೀಯಗಳನ್ನು ಸ್ಟಾಲ್’ಗಳಲ್ಲಿರಿಸಿ ಮಾರಾಟ ಮಾಡಿದರು.
ಕಾರ್ಯಕ್ರಮದಲ್ಲಿ ಜೈನ್ ಪಬ್ಲಿಕ್ ಶಾಲೆಯ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಪೋಷಕರು ತಮಗಾಗಿ ಆಯೋಜಿಸಲಾಗಿದ್ದ ರ್ಯಾಂಪ್ ವಾಕ್’ನಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post