ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀವಿಜಯ ಕಲಾನಿಕೇತನ (ರಿ) ವತಿಯಿಂದ ಸೆ.25ರ ಶನಿವಾರ ಸಂಜೆ 6 ಗಂಟೆಗೆ ಪವಿತ್ರಾಂಗಣದಲ್ಲಿ ವಿಜಯಾ ಶ್ರೀಧರ್ ಅವರ ವಿಜಯಾ ಶ್ರೀಧರ್ ಸಮಗ್ರ ಲಲಿತ ಪ್ರಬಂಧಗಳು ಎಂಬ ಪುಸ್ತಕದ ಲೋಕಾರ್ಪಣೆ ಹಮ್ಮಿಕೊಳ್ಳಲಾಗಿದೆ.


ಡಾ. ಹೆಚ್.ಟಿ. ಕೃಷ್ಣಮೂರ್ತಿ ಪುಸ್ತಕ ಬಿಡುಗಡೆ ಮಾಡಲಿದ್ದು, ಡಾ. ಎಸ್. ನಾಗಮಣಿ ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ.
ಶ್ರೀವಿಜಯದ ಅಧ್ಯಕ್ಷ ಡಾ ಕೆ.ಆರ್. ಶ್ರೀಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಬಿ. ಟಿ. ಅಂಬಿಕಾ ಅವರ ಭಾವಗೀತೆಗಳ ಗಾಯನವಿರುತ್ತದೆ. ಆಸಕ್ತರು ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಡಾ. ಕೆ.ಎಸ್.ಪವಿತ್ರ ಕೋರಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















