ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಬಿಎಚ್ ರಸ್ತೆಯಲ್ಲಿರುವ ಮಾಡರ್ನ್ ಟಾಕೀಸ್ ಹಿಂಭಾಗದಲ್ಲಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಹಾಕಲಾಗಿರುವ ಅನುಪಯುಕ್ತ ವಸ್ತುಗಳನ್ನು ತೆರವುಗೊಳಿಸಲು ಅಂಗಡಿ ಮಾಲೀಕರಿಗೆ ಮೇಯರ್ ಸುನೀತಾ ಅಣ್ಣಪ್ಪ ಒಂದು ವಾರಗಳ ಕಾಲ ಗಡುವ ನೀಡಿದ್ದಾರೆ.
ಇಂದು ಖುದ್ಧು ಈ ಪ್ರದೇಶಗಳಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿ ಅವರು, ಸಾರ್ವಜನಿಕ ರಸ್ತೆಯಲ್ಲಿ ಅನಧಿಕೃತವಾಗಿ ಕಬ್ಬಿಣ, ಬಸ್, ಕಾರು ಸೇರಿದಂತೆ ವಾಹನಗಳ ಅನುಪಯುಕ್ತ ವಸ್ತುಗಳನ್ನು ಹಾಕಿರುವುದಕ್ಕೆ ಅವರು ಕಿಡಿ ಕಾರಿದರು.
ಸಾರ್ವಜನಿಕರಿಗೆ ತೊಂದರೆಯಾಗಿರುವ ಈ ವಸ್ತುಗಳನ್ನು ಒಂದು ವಾರಗಳ ಒಳಗಾಗಿ ತೆರವುಗೊಳಿಸಬೇಕು ಹಾಗೂ ಮುಂದೆ ಈ ರೀತಿ ಹಾಕಬಾರದು ಎಂದು ಎಚ್ಚರಿಕೆ ನೀಡಿದರು.
ಉಪಮೇಯರ್ ಶಂಕರ್ ಗನ್ನಿ, ಪ್ರಮುಖರಾದ ಕೆ.ವಿ.ಅಣ್ಣಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post