ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಿಇಎಸ್‌ಐಎಎಮ್‌ಎಸ್ ಕಾಲೇಜಿನ #PESIAMS College ಬಿಬಿಎ ಹೋಟೆಲ್ ಮತ್ತು ಇವೆಂಟ್ ಮ್ಯಾನೇಜ್‌ಮೆಂಟ್ ವಿಭಾಗದ ಹಾಸ್ಪಿಟಾಲಿಟಿ ಹಾರಿಝಾನ್ ಕ್ಲಬ್ ಮತ್ತು ಯುವಟೂರಿಸಂ ಕ್ಲಬ್‌ಗಳ ಸಹಯೋಗದಲ್ಲಿ `ಆತಿಥ್ಯ ಮತ್ತು ಪ್ರವಾಸೋದ್ಯಮದ ಭವಿಷ್ಯವನ್ನುರೂಪಿಸುವ ಉದಯೋನ್ಮುಖ ಪ್ರವೃತ್ತಿಗಳು’ ಎಂಬ ವಿಷಯದ ಕುರಿತು ಆನ್‌ಲೈನ್ ವೆಬಿನಾರ್‌ನ್ನು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಗುಲ್‌ಮಾರ್ಗ್ನ ದ ಖೈಬರ್ ಹಿಮಾಲಯನ್ ರೆಸಾರ್ಟ್ ಹಾಗೂ ಸ್ಪಾದಜೆನೆರಲ್ ಮ್ಯಾನೇಜರ್ ಆದಂತಹ ವಿನಿತ್ ಛಬ್ರಾ ಅವರು ಭಾಗವಹಿಸಿದ್ದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಟೂರಿಸಂ ಮತ್ತು ಆತಿಥ್ಯ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಅಮೂಲ್ಯ ಮಾಹಿತಿಯನ್ನು ಒದಗಿಸಿದರು.
ಆತಿಥ್ಯ ಕ್ಷೇತ್ರದಲ್ಲಿನ ಅವಕಾಶಗಳು, ಎದುರಿಸಬೇಕಾದ ಸವಾಲುಗಳು, ಆನ್‌ಲೈನ್ ಮೂಲಕ ನೀಡಲಾಗುವ ಸೇವೆಗಳು, ಆನ್‌ಲೈನ್ ಕ್ಷೇತ್ರದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿರುವ ಏಜೆನ್ಸಿಗಳು, ರೆಸ್ಟೋರೆಂಟ್‌ಗಳಲ್ಲಿ ಆಹಾರ ಮತ್ತು ಸೇವೆಗಳಲ್ಲಿ ಇರಬೇಕಾದ ಗುಣಮಟ್ಟಗಳ ಕುರಿತು ಹಲವು ವಿಚಾರಗಳನ್ನು ಮಂಡಿಸಿದರು.
ಈ ಕ್ಷೇತ್ರಕ್ಕೆ ಪ್ರವೇಶಿಸುವ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಾದ ಅಗತ್ಯ ಕೌಶಲ್ಯಗಳ ಕುರಿತು ಕಿವಿಮಾತನ್ನು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಸುದರ್ಶನ್, ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಿ. ಮೋಹನ್ ಹಾಗೂ ಅಧ್ಯಾಪಕರುಗಳಾದ ಉತ್ಕರ್ಷ ಸಿಂಗ್, ಟಿ.ಎಂ. ರಶ್ಮಿ ಮತ್ತು ಬಿಬಿಎ ಟಿಟಿ ಹಾಗೂ ಬಿಬಿಎ ಎಚ್‌ಇಎಂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post