ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳ #KSRTC Bus ಮೇಲೆ ಗುಟ್ಕಾ ಜಾಹೀರಾತು ತೆರವುಗೊಳಿಸಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆ ಸದಸ್ಯರು ಇಂದು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ರವಿಪ್ರಸಾದ್ ಎಂ. ಡಿಸೆಂಬರ್ ತಿಂಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಮೇಲೆ ಇರುವ ಸಾರ್ವಜನಿಕರಿಗೆ ಮಾರಕವಾದ ವಿಮಲ್, ಗುಟ್ಕಾ ಇನ್ನಿತರ ಮಾದಕ ವಸ್ತುಗಳ ಜಾಹೀರಾತನ್ನು ಹಾಗೂ ಇಂಗ್ಲೀಷ್ ಭಾಷೆಯ ಜಾಹೀರಾತನ್ನು ತೆಗೆಯ ಬೇಕೆಂದು ಹೋರಾಟವನ್ನು ಶಿವಮೊಗ್ಗದಿಂದ ಪ್ರಾರಂಭಿಸಿದ್ದೆವು. ಅದಕ್ಕೆ ಪ್ರಜ್ಞಾವಂತ ನಾಗರಿಕರಿಂದ ರಾಜ್ಯದಾದ್ಯಂತ ವಿಶೇಷ ಬೆಂಬಲ ಸಿಕ್ಕಿದ್ದು ಬೆಂಗಳೂರಿನಲ್ಲೂ ಹೋರಾಟ ಮುಂದುವರಿದಿತ್ತು. ಸಾರಿಗೆ ಸಚಿವರಿಗೂ ಸಂಘಟನೆಯಿಂದ ಮನವಿ ನೀಡಿದ್ದೆವು. ಇದರಿಂದ ಸರ್ಕಾರ ಎಚ್ಚೆತ್ತುಕೊಂಡು ಸಾರಿಗೆ ಸಚಿವರು ಕೂಡಲೇ ಆದೇಶ ಹೊರಡಿಸಿ ಸರ್ಕಾರಿ ಬಸ್ಸಿನ ಮೇಲಿರುವ ಮಾದಕ ವಸ್ತುಗಳ ಜಾಹೀರಾತು ತೆಗೆಯುವಂತೆ ಹಾಗೂ ಇಂಗ್ಲೀಷ್ ಬರಹಗಳು, ಚಡ್ಡಿ ಹಾಗೂ ಒಳ ಉಡುಪುಗಳ ಜಾಹೀರಾತನ್ನು ತೆಗೆಯುವಂತೆ ಸೂಚನೆ ನೀಡಿದ್ದರು. ಇದಕ್ಕಾಗಿ ನಾವು ಸರ್ಕಾರವನ್ನು ನಾಗರಿಕರ ಪರವಾಗಿ ಅಭಿನಂದಿಸುತ್ತೇವೆ ಎಂದಿದ್ದಾರೆ.
ಇಂದು ಕೂಡ ಕೆಲವು ಬಸ್ಸುಗಳಲ್ಲಿ ಅದೇ ಜಾಹೀರಾತುಗಳು ಇರುವುದನ್ನು ಗಮನಿಸಿ ಅದನ್ನು ಕೂಡ ಕಿತ್ತು ಬಿಸಾಡಿದ್ದೇವೆ. ಸರ್ಕಾರ ಕೂಡಲೇ ಇನ್ನು ಯಾವುದಾದರೂ ಬಸ್ಸಿನ ಮೇಲೆ ಈ ಗುಟ್ಕಾ ಜಾಹೀರಾತುಗಳಿದ್ದರೆ ತೆರವುಗೊಳಿಸಲು ಆಗ್ರಹಿಸಿದರು. ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶೌಚಾಲಯದಲ್ಲಿ ಮೂತ್ರ ವಿಸರ್ಜನೆಗೆ ಉಚಿತ ಅವಕಾಶವಿದ್ದರೂ, ಹಿಂದೆ ಲೋಕಾಯುಕ್ತ ಪೊಲೀಸರು ದಾಳಿಮಾಡಿ ಸೂಚನೆ ನೀಡಿದ್ದರೂ ಸಹ ಮತ್ತೆ ಯಥಾಸ್ಥಿತಿ ಮುಂದುವರಿದಿದ್ದು ಅದನ್ನು ಕೂಡ ಸಂಘಟನೆಯ ಸದಸ್ಯರು ವಿರೋಧಿಸಿ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಕೂಡಲೇ ಕೂಡಲೇ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸಿಂಹಸೇನೆಯ ಪ್ರಮುಖರಾದ ಪ್ರಮುಖರಾದ ಮಧುಸೂದನ್, ನೂರುಲ್ಲಾ ಅಭಿಜಿತ್ ನವುಲೆ, ರಫೀಕ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















