ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿ ಶಿವಮೊಗ್ಗ ಜಿಲ್ಲೆಯ 11 ಸಂಘಟನಾತ್ಮಕ ಮಂಡಲಗಳ ವಿಶೇಷ ಸರಣಿ ಸಭೆ ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ಬಿಜೆಪಿ ಕಚೇರಿಯಲ್ಲಿ ಇಂದು ಜರುಗಿತು.
ಪ್ರತಿ ಮಂಡಲಗಳ ಸಭೆಯು ಒಂದು ಗಂಟೆಯ ಅವಧಿಯಗಿದ್ದು, ಸಂಘಟನಾತ್ಮಕ – ತಾಲೂಕು ಪಂಚಾಯತ್ – ಜಿಲ್ಲಾ ಪಂಚಾಯತ್ – ಮಹಾನಗರಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾಣೆಯ ಹಿನ್ನಲೆಯಲ್ಲಿ ಸರಣಿ ಸಭೆಗಳು ಮಹತ್ವಪೂರ್ಣವಾಗಿವೆ.
ಸಂಘಟತ್ಮಕವಾಗಿ ಸ್ಥಳೀಯ ಚುನಾವಣೆಗಳನ್ನು ಗೆಲ್ಲಲು ಅಗತ್ಯ ಸಲಹೆ ಪಡೆದು ಮುಂದಿನ ಕಾರ್ಯಕ್ರಮ ಯೋಜನೆ ರೂಪಿಸಲಾಯಿತು. ಸಭೆಯಲ್ಲಿ ಮಂಡಲಗಳ ಜವಾಬ್ದಾರಿಯುತ ಪ್ರಮುಖ ಕಾರ್ಯಕರ್ತರುಗಳು ಭಾಗವಹಿಸಿದ್ದರು.
ಸಂಫಟನೆ – ಚುನಾವಣೆ ಯ ದೃಷ್ಟಿಯಿಂದ ಮಹತ್ವ ಪೂರ್ಣ ಸಭೆಯು ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಮುಖಂಡರುಗಳಾದ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ರಾಜ್ಯ ಪ್ರಕೋಷ್ಟಗಳ ಸಂಯೋಜಕ ಎಸ್ ದತ್ತಾತ್ರಿ, ಶಾಸಕರುಗಳಾದ ಚನ್ನಬಸಪ್ಪ (ಚೆನ್ನಿ), ಡಾ. ಧನಂಜಯ ಸರ್ಜಿ, ಡಿ. ಎಸ್.ಅರುಣ್, ಉತ್ತರ ಕನ್ನಡದ ವೆಂಕಟೇಶ್ ನಾಯಕ್, ದಕ್ಷಿಣ ಕನ್ನಡದ ಉದಯಕುಮಾರ್ ಶೆಟ್ರು,ನಿಕಟಪೂರ್ವ ಜಿಲ್ಲಾಧ್ಯಕ್ಷ ಮೇಘರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್, ಹರಿಕೃಷ್ಣ, ಮಾಲತೇಶ್, ಉಪಸ್ಥಿತಿಯೊಂದಿಗೆ ಆಯಾ ಮಂಡಲದ ಅಧ್ಯಕ್ಷರುಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















