ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರೀಯ ನಾಯಕರ ಒಪ್ಪದದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿಯನ್ನು ಒಟ್ಟಾಗಿ ಗೆಲ್ಲಿಸುತ್ತೇವೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಸ್ತುವಾರಿ ರಘುಪತಿ ಭಟ್ #Raghupathi Bhat ಹಾಗೂ ಜೆಡಿಎಸ್ ಶಾಸಕಿ #Sharada Pooryanaik ಶಾರದಾ ಪೂರ್ಯಾನಾಯ್ಕ್ ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜೆಡಿಎಸ್ ಪಕ್ಷವೀಗ ಎನ್‍ಡಿಎ ಪಕ್ಷದ ಮೈತ್ರಿ ಪಕ್ಷವಾಗಿದೆ. ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಹೊಂದಾಣಿಕೆಯಾಗಿದ್ದರು ಕೂಡ ಬೂತ್ ಮಟ್ಟದಲ್ಲಿ ಈ ಹೊಂದಾಣಿಕೆಗೆ ಸ್ಪಷ್ಟರೂಪ ಬಂದಿರಲಿಲ್ಲ. ಶಿವಮೊಗ್ಗ ಗ್ರಾಮಾಂತರ ಪ್ರದೇಶದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಇದ್ದದು ನಿಜ. ಆದರೆ ಅದೆಲ್ಲ ಈಗ ಕರಗಿ ನಾವು ಒಟ್ಟಾಗಿದ್ದೇವೆ. ಗ್ರಾಮಾಂತರ ವಿಧಾನಸಭ ಕ್ಷೇತ್ರದಿಂದ ಅತಿ ಹೆಚ್ಚು ಮತದ ಮೂಲಕ ಬಿ.ವೈ.ರಾಘವೇಂದ್ರ #B Y Raghavendra ಅವರನ್ನು ಗೆಲ್ಲಿಸಲಾಗುವುದು ಎಂದು ರಘುಪತಿ ಭಟ್ ಹಾಗೂ ಶಾರದಾ ಪೂರ್ಯನಾಯ್ಕ್ ಒಟ್ಟಾಗಿ ಹೇಳಿದರು.

Also read: ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕ್ಯಾತ್ ಲ್ಯಾಬ್ ಸೌಲಭ್ಯಕ್ಕೆ ಚಾಲನೆ
ಜೆಡಿಎಸ್‍ನ ಒಂದೂ ಮತಗಳು ಬೇರೆಕಡೆ ಹೋಗದ ರೀತಿಯಲ್ಲಿ ಗ್ರಾಮಾಂತರ ಸಭೆ ಆಗಿದೆ. ಗ್ರಾಪಂ, ಜಿ ಪಂ ಮಟ್ಟದಲ್ಲಿ ಪ್ರಚಾರ ವ್ಯವಸ್ಥಿತವಾಗಿ ನಡೆಯಲಿದೆ. ಬೂತ್ ಮಟ್ಟದಲ್ಲಿಯೂ ಜೊತೆಯಾಗಿ ಕಾರ್ಯಕರ್ತರು ಪ್ರಚಾರ ಮಾಡಿ ದೊಡ್ಡ ಲೀಡ್ ರಾಘವೇಂದ್ರರಿಗೆ ತಂದುಕೊಡಲಿದ್ದೇವೆ ಎಂದರು.

ಮಾಜಿ ಶಾಸಕ ಕೆ.ಬಿ. ಅಶೋಕ ನಾಯ್ಕ ಮಾತನಾಡಿ, ರಾಷ್ಟ್ರೀಯ, ರಾಜ್ಯ ನಾಯಕರ ನಿರ್ಣಯದಂತೆ ಸಮನ್ವಯ ಪ್ರಚಾರ. ಜೆಡಿಎಸ್ ಅಭ್ಯರ್ಥಿಗಳಿದ್ದ ಕಡೆ ಬಿಜೆಪಿ, ಬಿಜೆಪಿ ಅಭ್ಯರ್ಥಿ ಇದ್ದ ಕಡೆ ಜೆಡಿಎಸ್ ಬೆಂಬಲ. 28 ಕ್ಷೇತ್ರಗಳಲ್ಲೂ ಗೆಲ್ಲಿಸುವ ಕೆಲಸ ಪರಸ್ಪರ ಆಗುತ್ತಿದೆ. ತಳಮಟ್ಟದ ಕಾರ್ಯಕರ್ತರ ಮಧ್ಯೆ ಸಮನ್ವಯದ ಕೊರತೆ ಇರುತ್ತೆ. ಅದನ್ನು ಸರಿಪಡಿಸುವ ಕೆಲಸ ನಡೆದಿದೆ. ಅತಿ ಹೆಚ್ಚಿನ ಕೆಲಸ ಮಾಡಬೇಕಿದೆ. ಗೊಂದಲಕ್ಕೆ ಅವಕಾಶ ಇಲ್ಲದಂತೆ ಸಭೆಗಳು ನಡೆಯಲಿವೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನ ಕುಮಾರ್, ಕಡಿದಾಳ್ ಗೋಪಾಲ್, ಕೆ.ಜಿ. ಕುಮಾರ ಸ್ವಾಮಿ, ಡಾ. ಧನಂಜಯ ಸರ್ಜಿ, ರಾಮಕೃಷ್ಣ, ಗೀತಾ, ಚಂದ್ರಶೇಖರ್ ಎಸ್., ವಿರೂಪಾಕ್ಷಪ್ಪ ಜಿ.ಇ., ಕಾಂತರಾಜ್ ಸೋಮಿನಕೊಪ್ಪ, ದೀಪಕ್ ಸಿಂಗ್, ವಿನ್ಸೆಂಟ್, ಸಿದ್ದಪ್ಪ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post