ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಜೆಸಿಐ ಮಲ್ನಾಡ್ ಭಾನುವಾರ ಕಂಟ್ರಿಕ್ಲಬ್ ನಲ್ಲಿ ಹಮ್ಮಿಕೊಂಡಿದ್ದ ಜೆಸಿಐ ವಿಕ್ ೨೦೨೨ ರಲ್ಲಿ ಕಾರ್ಯಕ್ರಮದಲ್ಲಿ ಪತ್ರಿಕೆ ಹಾಗೂ ವನ್ಯಜೀವಿ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ರವರಿಗೆ “ಔಟ್ ಸ್ಟ್ಯಾಂಡಿಂಗ್ ಯಂಗ್ ಪರ್ಸನ್” ಅವಾರ್ಡ್ ಅನ್ನು ನೀಡಿ ಗೌರವಿಸಲಾಯಿತು,
ಕಳೆದ ಹದಿನೈದು ವರ್ಷಗಳಿಂದ ವಿಶೇಷ ಛಾಯಾಚಿತ್ರಣದ ಮೂಲಕ ಗಮನಸೆಳೆದಿರುವ ಪತ್ರಿಕೆ ಹಾಗೂ ವನ್ಯಜೀವಿಗಳ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ರವರು ವನ್ಯಜೀವಿಗಳ ಕುರಿತಾದ ಜಾಗೃತಿ ಛಾಯಚಿತ್ರ ಪ್ರದರ್ಶನವನ್ನು ವಿವಿಧ ಶಾಲಾ ಕಾಲೇಜುಗಲ್ಲಿ ಹಾಗೂ ಸಾರ್ವಜನಿಕ ಸಮಾರಂಭಗಳಲ್ಲಿ ವನ್ಯಜೀವಿ, ಮತ್ತು ಪರಿಸರ, ಜನ ಜೀವನ ಸಂಕಷ್ಟಗಳ ಛಾಯಾಚಿತ್ರ ಪ್ರದರ್ಶನದ ಮೂಲಕ ಜನ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಾ ಬಂದಿದ್ದಾರೆ.
ಆರ್ಥಿಕ ಸಂಕಷ್ಟಗಳ ನಡುವೆಯೂ ಛಲಬಿಡದ ತ್ರಿವಿಕ್ರಮನಂತೆನಂತೆ ನೂರಾರು ಕಿಲೋಮೀಟರ್ ಕ್ರಮಿಸಿ ವಿವಿಧ ಪ್ರದೇಶದ ಧಾರ್ಮಿಕ ಆಚರಣೆ,ಜನ ಜೀವನ, ಪರಿಸರ, ಹಾಗೂ ಕಾಡುಮೆಡು ಸುತ್ತಿ ಚಿತ್ರಿಸಿದ ವನ್ಯಜೀವಿ , ಛಾಯಾಚಿತ್ರಗಳಿಗೆ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮನ್ನಣೆ, ಚಿನ್ನ, ಬೆಳ್ಳಿ ಪ್ರಶಸ್ತಿ, ನಗದು ಬಹುಮಾನ ಕ್ಕೆ ಪಾತ್ರರಾಗಿದ್ದಾರೆ. ನಗು ಮೊಗದ ಮೌನ ಸಾಧಕ ಶಿವಮೊಗ್ಗ ನಾಗರಾಜ್ ಸಂದ ಪ್ರಶಸ್ತಿ ಸನ್ಮಾನ ಪುರಸ್ಕಾರಗಳು ಅರಸಿ ಬಂದಿವೆ.
ಇವರ ಛಾಯಾಚಿತ್ರಗಳು ಅಮೇರಿಕಾದ ನ್ಯೂಯಾರ್ಕ್, ನಾರ್ತ್ ಮೇಸಿಡೋಣಿಯ, ಬಾಂಗ್ಲಾದೇಶ, ಶೀಲಂಕಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದು ಪ್ರದರ್ಶನಗೊಂಡು ಜನ ಮೆಚ್ಚುಗೆ ಪಡೆದಿದೆ.
ಪತ್ರಿಕೆ ಮತ್ತು ವನ್ಯಜೀವಿ ಛಾಯಾಗ್ರಾಹಕ ಕ್ಷೇತ್ರದ ಸಾಧನೆಗಾಗಿ ಶಿವಮೊಗ್ಗ ನಾಗರಾಜ್ ರವರಿಗೆ ಜೆಸಿಐ ಮಲ್ನಾಡ್ ನೀಡಿರುವ ಔಟ್ ಸ್ಟ್ಯಾಂಡಿಂಗ್ ಯಂಗ್ ಪರ್ಸನ್ ಅವಾರ್ಡ್” ಛಾಯಾಗ್ರಾಹಣ ಕ್ಷೇತ್ರದ ಹಿರಿಮೆಗೆ ಮತ್ತೋಂದು ಗರಿ ನೀಡಿ ಗೌರವಿಸಿದೆ. ಈ ಸಂಧರ್ಭದಲ್ಲಿ ಜೆ.ಸಿ.ಐ ಮಲ್ನಾಡ್ ಅಧ್ಯಕ್ಷ ಪ್ರದೀಪ್ ಎಸ್, ನಿಕಟಪೂರ್ವ ಅಧ್ಯಕ್ಷ ಶೀನಾಗ್ ಎಸ್.ಎನ್, ಜಂಟಿಕಾರ್ಯದರ್ಶಿ ಕಮಲೇಶ್, ಸುನಿದ್ದಿ, ಕೆ.ವಿ ವಂಸತ್ ಕುಮಾರ್ ,ಭಾರ್ಗವ್ ಮತ್ತಿತರರು ಉಪಸ್ಥಿತರಿದ್ದರು.
Also read: ಬದುಕಿನ ಅಧ್ಯಾಯಗಳಲ್ಲಿ ಗುರುವಿನ ಪಾತ್ರ ಮಹತ್ವದ್ದು: ಪ್ರಭಾಕರ್ ಅಭಿಪ್ರಾಯ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post