ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹದಿ ಹರೆಯದ ಮಕ್ಕಳ ಮನಸ್ಸು ಮೊಗ್ಗು ಇದ್ದಂತೆ, ಹೂವಂತೆ ಅರಳಿ ಕಂಪು ಸೂಸಿ ಎಂದು ಖ್ಯಾತ ರಂಗ ಕಲಾವಿದೆ, ಸಿನಿಮಾ ನಟಿ, ವಿಧಾನ ಪರಿಷತ್ ಸದ್ಯಸೆ ಉಮಾಶ್ರೀ #Umashri ಹೇಳಿದರು.
ಅವರು ದಸರಾ ಅಂಗವಾಗಿ ನಗರಕ್ಕೆ ಆಗಮಿಸಿದ್ದು ಆರ್ಯ ಪಿಯು ಕಾಲೇಜಿಗೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದರು.
ಪಿ ಯು ಸಿ ಮಕ್ಕಳ ಪಾಲಿಗೆ ಅತ್ಯಂತ ಮಹತ್ವವಾದದು ಹದಿಹರಿಯದ ಈ ವಯಸ್ಸಿನಲ್ಲಿ ಕಾಡುವ, ಪಾಡುವ, ಹಾಡುವ ತುಂಟತನದ ಮನಸ್ಸು ಇರುತ್ತದೆ ಮನಸ್ಸು ಕೂಡ ಚಂಚಲತೆಯಿಂದ ಕೂಡಿರುತ್ತದೆ ಇದನ್ನೆಲ್ಲ ದಾಟಿ ಓದುವ ಕಡೆ ಗಮನಹರಿಸಿ ಎಂದು ಕಿವಿಮಾತು ಹೇಳಿದರು.
Also read: ಆರ್ ಬಿಐ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅವಿರಾಲ್ ಜೈನ್ ನೇಮಕ
ಮೊಬೈಲ್ ಎಂಬುದು ಒಂದು ದೊಡ್ಡ ಮಾಯಾಜಾಲ ಮಕ್ಕಳೇ ಇದರ ಗೀಳಗೆ ಬೀಳಬೇಡಿ, ಜ್ಞಾನಕ್ಕಾಗಿ ಮಾತ್ರ ಅದನ್ನು ಬಳಸಿ ,ಬೇಡವಾದ ವಿಷಯಗಳಿಗೆ ಗಮನ ಕೊಡಬೇಡಿ ತಂದೆ ತಾಯಿಗಳ ಕಷ್ಟಗಳ ಅರ್ಥ ಮಾಡಿಕೊಳ್ಳಿ ಗುರುಗಳ ಮಾತನ್ನು ಕೇಳಿ ಏನೇ ಇಂಗ್ಲಿಷ್ ಕಲಿತರು ಕನ್ನಡಕ್ಕೆ ಆದ್ಯತೆ ಕೊಡಿ ಎಂದರು .
ಆರ್ಯ ಪಿಯು ಕಾಲೇಜಿನ ಅಧ್ಯಕ್ಷ ಎನ್ ರಮೇಶ ಮಾತಾನಾಡಿ ಉಮಾಶ್ರೀ ಒಡಲಾಳದ ಸಾಕವ್ವ, ಪುಟ್ಟಕ್ಕನ ಮಕ್ಕಳಂತೆ ಎಲ್ಲ ಮಕ್ಕಳನ್ನು ಸಲುವುವವರು, ಸುಮಾರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಸಿನಿಮಾಲೋಕದಲ್ಲಿ ನಕ್ಷತ್ರದಂತೆ ಹೊಳೆಯುತ್ತಿದ್ದಾರೆ, ಅವರ ಹಚ್ಚಿದ ನಟನೆಯ ಹಣತೆ ಸದಾ ಬೆಳಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ನವೀನ್ ಶ್ರೀನಿವಾಸಚಾರ್ಯ, ಕಣ್ಣನ್ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post