ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಧಾನಪರಿಷತ್ತಿಗೆ ಶಿವಮೊಗ್ಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಸದಸ್ಯರಾಗಿ ಆಯ್ಕೆಯಾಗಿರುವ ಡಿ.ಎಸ್. ಅರುಣ್ ಅವರಿಗೆ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ವೇದಿಕೆಯಿಂದ ಅಭಿನಂದಿಸಲಾಯಿತು.
ವೇದಿಕೆ ಅಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಅವರು ಮಾತನಾಡಿ, ಈಗಾಗಲೇ ಮಂಜೂರಾಗಿ ನಿಂತಿರುವ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳ ಬಗ್ಗೆ ಶಾಸಕ ಡಿ.ಎಸ್. ಅರುಣ್ ಅವರು ಸೂಕ್ತ ನಿರ್ದೇಶನ ನೀಡಿ ಸರ್ಕಾರದ ಕಡೆಯಿಂದ ಯೋಜನೆ ಪೂರ್ಣಗೊಳಿಸಲು ಕೋರಿದರು.
ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಪ್ರತಿ ಭಾನುವಾರ ಪ್ರವಾಸಿ ತಾಣಗಳಿಗೆ ‘ಪ್ಯಾಕೇಜ್ ಪ್ರವಾಸ’ ಏರ್ಪಡಿಸಲು ಮನವಿ ಅರ್ಪಿಸಲಾಯಿತು. ಭಾನುವಾರಗಳಂದು ಖಾಸಗಿ ಅಥವಾ ರಾಜ್ಯ ಸಾರಿಗೆ ಬಸ್ ವ್ಯವಸ್ಥೆ ಮಾಡಲು ಕೋರಲಾಯಿತು. ವೇದಿಕೆ ಕಾರ್ಯದರ್ಶಿ ಕೆ. ಗೋಪಿನಾಥ್ ಪ್ರವಾಸಿ ತಾಣಗಳ ವಿವರ ನೀಡಿದರು.
ಸದ್ಯ ಮಾಹಿತಿಗಳನ್ನು ಸಂಗ್ರಹಿಸಿ, ಬಸ್ ಮಾಲೀಕರು ಮತ್ತು ರಾಜ್ಯ ಸಾರಿಗೆ ಸಂಸ್ಥೆಯೊಂದಿಗೆ ಚರ್ಚಿಸಿ ಪ್ರವಾಸಿ ಬಸ್ ವ್ಯವಸ್ಥೆ ಮಾಡುವುದಾಗಿ ಶಾಸಕ ಅರುಣ್ ಭರವಸೆ ನೀಡಿದರು.
ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ನಿರ್ದೇಶಕರಾದ ಡಾ. ಸುಧೀಂದ್ರ, ಸುಕುಮಾರ್ ,ಕೆ.ಜಿ. ಮಂಜುನಾಥ ಶರ್ಮ, ಮಂಜುನಾಥ ಮೂರ್ತಿ , ಶಂಕರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post