ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ #Terror Attack ಜೀವ ಕಳೆದಕೊಂಡ ಮೂವರು ಕನ್ನಡಿಗರ ಕುಟುಂಬಕ್ಕೆ ತಲಾ ಐವತ್ತು ಲಕ್ಷ ರೂ ಪರಿಹಾರವನ್ನು ರಾಜ್ಯಸರ್ಕಾರ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು #CM Siddaramaiah ಮಾಜಿ ಶಾಸಕರು, ಜೆಡಿಎಸ್ ರಾಜ್ಯ ಉಪಾಧ್ಯಕ್ಷರೂ ಅದ ಕೆ. ಬಿ. ಪ್ರಸನ್ನಕುಮಾರ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಾಕಿಸ್ತಾನಿ ಉಗ್ರರು ದೇಶದೊಳಗೆ ನುಗ್ಗಿಬಂದು ಕ್ರೂರವಾಗಿ ಪ್ರವಾಸಿಗರನ್ನು ಕೊಂದಿದ್ದಾರೆ. ಹೀಗೆ ಹತ್ಯೆಯಾದವರಲ್ಲಿ ಕುಟುಂಬಕ್ಕೆ ಆಧಾರವಾಗಿದ್ದವರೇ ಗುರಿಯಾಗಿದ್ದು ಇದರಿಂದ ಕುಟುಂಬಗಳವರು ಅನಾಥವಾಗಿದ್ದಾರೆ. ಹೀಗಿರುವಾಗ ರಾಜ್ಯಸರ್ಕಾರ ಕೇವಲ 10 ಲಕ್ಷ ಪರಿಹಾರ ಘೋಷಿಸಿರುವುದು ನ್ಯಾಯವಾದ ಪರಿಹಾರವಲ್ಲ ಎಂದಿದ್ದಾರೆ.
ಈ ಹಿಂದೆ ಕೇರಳದ ವ್ಯಕ್ತಿಯೊಬ್ಬರು ರಾಜ್ಯದಲ್ಲಿ ಆನೆ ತುಳಿತದಿಂದ ಸಾವಿಗೀಡಾದಾಗ ರಾಜ್ಯ ಸರ್ಕಾರ 25ಲಕ್ಷ ರೂ. ಪರಿಹಾರ ನೀಡಲಾಗಿತ್ತು. ಆದ್ದರಿಂದ ಕೂಡಲೇ ಸಿದ್ದರಾಮಯ್ಯನವರು ಉಗ್ರರ ಅಟ್ಟಹಾಸದಿಂದ ಅನಾಥರಾಗಿರುವ ಕುಟುಂಬಗಳಿಗೆ ತಲಾ ಐವತ್ತು ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post