ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, #Shivarajkumar ರಿಯಲ್ ಸ್ಟಾರ್ ಉಪೇಂದ್ರ #Upendra ಹಾಗೂ ರಾಜ್ ಬಿ ಶೆಟ್ಟಿ #Raj B Shetty ಇದೇ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿರುವ ಪ್ಯಾನ್ ಇಂಡಿಯಾ ಸಿನಿಮಾ 45 ನೇ ಡಿ. 25 ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಹೊಸ ವರ್ಷದ ಸಂದರ್ಭ, ಸಂಭ್ರಮ ಹಾಗೂ ನಿರೀಕ್ಷೆಗಳ ನಡುವೆಯೇ ಈ ಚಿತ್ರ ತೆರೆ ಕಾಣುತ್ತಿರುವುದು ಸಿನಿಮಾ ರಸಿಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.ಸಂಗೀತ ಕ್ಷೇತ್ರದಲ್ಲಿ ಮಿಂಚಿದ ತಮ್ಮದೇ ಛಾಪು ಮೂಡಿಸಿರುವ ಅರ್ಜುನ್ ಜನ್ಯ ಇದೇ ಮೊದಲು ನಿರ್ದೇಶನ ಮಾಡಿರುವ ಅದ್ದೂರಿ ವೆಚ್ಚದ ಸಿನಿಮಾ ಇದು. ಬಿಗ್ ಬಜೆಟ್ ಜತೆಗೆ ಬಹುತಾರಾಗಣ ಹಾಗೂ ತಾಂತ್ರಿಕ ವೈಭವ ಬಹುದೊಡ್ಡ ಚಿತ್ರ ಎನ್ನುವ ಕಾರಣಕ್ಕೆ ಈಗಾಗಲೇ ಇದು ರಾಷ್ಟ್ರೀಯ ಮಟ್ಟದಲ್ಲೂ ಸೌಂಡ್ ಮಾಡಿದೆ.
ನನ್ನ ನಿರ್ದೇಶನದ ಮೊದಲ ಸಿನಿಮಾ ಎಂಬ ಖುಷಿ ಇದೆ, ಜೊತೆಗೆ ಭಯ ಮತ್ತು ಜವಾಬ್ದಾರಿಯೂ ಇದೆ. ಶಿವಣ್ಣ ಕೊಟ್ಟ ಧೈರ್ಯದಿಂದ ಮುಂದುವರಿದೆ. ನಿರ್ಮಾಪಕ ರಮೇಶ್ ರೆಡ್ಡಿ ಅವರ ಸಂಪೂರ್ಣ ಬೆಂಬಲದಿಂದ ಬಹು ವರ್ಷಗಳ ನನ್ನ ಕನಸಿನ ಸಿನಿಮಾ ಇದೀಗ ಸಾಕಾರವಾಗುತ್ತಿದೆ. ‘45’ ನೋಡುವವರಿಗೆ ತಾಂತ್ರಿಕವಾಗಿ ಹಾಗೂ ಮೇಕಿಂಗ್‍ನಲ್ಲಿ ಹೊಸ ಅನುಭವ ನೀಡುವುದು ಗ್ಯಾರೆಂಟಿ.
– ಅರ್ಜುನ್ ಜನ್ಯ, ಚಿತ್ರದ ನಿರ್ದೇಶಕಶಿವಣ್ಣ, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ – ಮೂವರದ್ದೂ ವಿನೂತನ ಅಭಿನಯ ಶೈಲಿ. ಕಥೆ ಕೇಳಿದಾಗಲೇ ಥ್ರಿಲ್ ಆಯಿತು. ಶೂಟಿಂಗ್ ಸಮಯದಲ್ಲಿ ಅದಕ್ಕಿಂತ ಹೆಚ್ಚು ನಿಬ್ಬೆರಗಾಗಿದ್ದೆ. ಆದರೆ ರೀ-ರೆಕಾಡಿರ್ಂಗ್ ಆದ ನಂತರ ಸಿನಿಮಾ ಯಾವ ಮಟ್ಟಕ್ಕೆ ಬಂದಿದೆ ಎಂಬುದು ವರ್ಣನೆಗೆ ಅಮಾನ್ಯ. ಅರ್ಜುನ್ ಜನ್ಯ ಅವರ ನಿರ್ದೇಶನ ಹಾಗೂ ತ್ರಿವಳಿಗಳ ಅಭಿನಯ ಎಲ್ಲ ವರ್ಗದ ಪ್ರೇಕ್ಷಕರ ಮನ ಗೆಲ್ಲಲಿದೆ.
– ರಮೇಶ್ ರೆಡ್ಡಿ, ನಿರ್ಮಾಪಕ

ಚಿತ್ರ ತಂಡದ ಪ್ರಕಾರ, ಚಿತ್ರದಲ್ಲಿ ಅನೇಕ ದೃಶ್ಯಗಳನ್ನು ಉನ್ನತ ಮಟ್ಟದ ದೃಶ್ಯವೈಭವ ಮತ್ತು ಹೊಸ ತಂತ್ರಜ್ಞಾನ ಬಳಸಿ ರೂಪಿಸಲಾಗಿದೆ. ಅದೇ ಕಾರಣಕ್ಕೆ ‘45’ ಸಿನಿಮಾ ಕನ್ನಡ ಮಾತ್ರವಲ್ಲ, ಪ್ಯಾನ್ ಇಂಡಿಯಾ ಪ್ರೇಕ್ಷಕರಿಗೂ ಹೊಸ ಅನುಭವ ನೀಡಲಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.ಸಿನಿಮಾದ ಹಾಡುಗಳು ಈಗಾಗಲೇ ಡಿಜಿಟಲ್ ವೇದಿಕೆಗಳಲ್ಲಿ ಅಬ್ಬರ ಸೃಷ್ಟಿಸಿವೆ. ಇನ್ನೇನು ಹೊಸ ವರ್ಷದ ಆಗಮನದ ಹೊತ್ತಿಗೆ ಚಿತ್ರ ಮಂದಿರಗಳಿಗೆ ಬರುವ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡದ ಮತ್ತೊಂದು ಹೆಮ್ಮೆ ಆಗುವುದು ಖಚಿತ ಎನ್ನುವ ಮಾತುಗಳು ಕನ್ನಡ ಚಿತ್ರರಂಗದ ವಲಯದಲ್ಲಿ ಕೇಳಿ ಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post