ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೇತಾಜಿ ಸುಭಾಷ್ ಚಂದ್ರಬೋಸ್ #Nethaji Subhashchandra Bose ಅವರ ಜನ್ಮದಿನ `ಪರಾಕ್ರಮ್ ದಿವಸ್’ #Parakram Diwas ಅಂಗವಾಗಿ ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನಲ್ಲಿ #Subbaiah Dental College ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಯಶಸ್ವಿಯಾಯಿತು.
ವೈದ್ಯಕೀಯ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ.ಎಸ್. ನಾಗೇಂದ್ರ ಮಾತನಾಡಿ, ಪುರುಷರಲ್ಲಿ ಪ್ರತಿ 01 ಕಿಲೋ ಗ್ರಾಂ ದೇಹದ ತೂಕಕ್ಕೆ 76 ಮಿಲೀ ಮತ್ತು ಮಹಿಳೆಯರಲ್ಲಿ ಪ್ರತಿ 01 ಕಿಲೋ ಗ್ರಾಂ ದೇಹದ ತೂಕಕ್ಕೆ 66 ಮಿಲೀನಷ್ಟು ರಕ್ತ ಇರುತ್ತದೆ. ಪ್ರತಿ 01 ಕಿಲೋ ಗ್ರಾಂ ನ ದೇಹದ ತೂಕಕ್ಕೆ ಕೇವಲ 8 ಮಿಲೀನಂತೆ ಒಂದು ಬಾರಿಗೆ ಗರಿಷ್ಟ 450 ಮಿಲೀನಷ್ಟು ರಕ್ತವನ್ನು ಮಾತ್ರ ಪಡೆಯಲಾಗುವುದು ಎಂದರು.

Also read: ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ 3 ತಿಂಗಳು ಜೈಲು ಶಿಕ್ಷೆ | ಕಾರಣವೇನು?
ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್. ಸುರೇಶ್ ಮಾತನಾಡಿ, ರಕ್ತದಾನವು ರಕ್ತದ ಕಬ್ಬಿಣದ ಮಟ್ಟವನ್ನು ನಿಯಂತ್ರಿಸುವುದು ಮತ್ತು ಹೃದಯಾಘಾತ ಮತ್ತು ಹೃದಯರಕ್ತನಾಳದ ಅಪಘಾತಗಳ ಅಪಾಯವನ್ನು ಕಡಿಮೆ ಮಾಡುವುದು ಸೇರಿದಂತೆ ಅನೇಕ ವೈದ್ಯಕೀಯ ಪ್ರಯೋಜನಗಳನ್ನು ನೀಡುತ್ತದೆ. ಒಬ್ಬ ದಾನಿಯ ಕೊಡುಗೆಯು ಮೂರು ಸ್ವೀಕರಿಸುವವರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ತಿಳಿಸಿದರು.

ನ್ಯಾಶನಲ್ ಮೆಡಿಕೋ ಆರ್ಗನೈಸೇಷನ್ ಶಿವಮೊಗ್ಗ ವಿಭಾಗದ ಸಹಯೋಗದಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post