ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಓದಿನ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಸಾಧಿಸಿ ಸರ್ವತೋಮುಖ ಬೆಳವಣಿಗೆ ಪಡೆಯುವುದೆ ಶಿಕ್ಷಣದ ನಿಜವಾದ ಗುರಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಅಭಿಪ್ರಾಯಪಟ್ಟರು.
ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ ವತಿಯಿಂದ ಸೋಮವಾರ ಸಂಜೆ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಶಾಲಾ ಹಂತದ ನಂತರ ಮುಂದಿನ ಶಿಕ್ಷಣಕ್ಕೆ ಆಯ್ಕೆ ಮಾಡಿಕೊಳ್ಳುವಾಗ, ಬಲವಂತದ ಅಥವಾ ಗೊಂದಲದ ಆಯ್ಕೆಗಿಂತ, ಆಸಕ್ತಿಯಿರುವ ವಿಷಯದಲ್ಲಿ ಅಧ್ಯಯನಶೀಲರಾಗಿ. ನೀಟ್ ಸಿಇಟಿ ಪರೀಕ್ಷೆಗಳಿಗೆ ಪ್ರೌಢಶಾಲೆಯ ಹಂತದಲ್ಲಿಯೆ ಅರಿವು ಪಡೆಯಿರಿ. ಪೋಷಕರು ಮಕ್ಕಳಲ್ಲಿ ಇಷ್ಟದ ಓದಿಗೆ ಪ್ರೇರಣೆ ನೀಡಿ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಮಾತನಾಡಿ, ವಿದ್ಯೆಯ ಪರಿಪೂರ್ಣತೆಗೆ ಇಚ್ಚಾಶಕ್ತಿಯ ಅವಶ್ಯಕತೆಯಿದೆ. ಹಿರಿಯರ ಜೀವನ ಚರಿತ್ರೆ ಗಮನಿಸಿದಾಗ, ಅವರ ಯಶಸ್ಸಿನ ಹಿಂದೆ ಕಲಿತ ವಿದ್ಯೆ, ಪಡೆದ ಸಂಸ್ಕಾರ ಪ್ರಮುಖ ಪಾತ್ರ ವಹಿಸಿರುತ್ತದೆ. ಸಮಾಜಮುಖಿ ಮನೋಭಾವವನ್ನು ಮಕ್ಕಳಿಗೆ ಕಲಿಸಿ ಎಂದು ಹೇಳಿದರು.
Also read: ಯಾವ ಭಾಷೆ ಪರಿವರ್ತನೆ ಹೊಂದಲಾರದೋ ಅಂತಹ ಭಾಷೆಗೆ ನೆಲೆ ಇರದು
ಭದ್ರಾವತಿಯ ಸೆಂಟ್ ಜೊಸೆಫ್ ಶಾಲೆಯ ಪ್ರಾಂಶುಪಾಲರಾದ ಲತಾ ರಾಬರ್ಟ್ ಮಾತನಾಡಿ, ಬದುಕಿನಲ್ಲಿ ಯಾವ ಸ್ಥಾನದಲ್ಲಿ ಹೊಳೆಯಬೇಕು ಎನ್ನುವುದನ್ನು ನಿರ್ಧಾರ ಮಾಡುವವರು ನೀವೆ. ಪ್ರೌಢಶಾಲಾ ಶಿಕ್ಷಣ ಬದುಕಿಗೆ ಭದ್ರ ಬುನಾದಿಯಾದರೆ, ಪದವಿಪೂರ್ವ ಶಿಕ್ಷಣ ಅಡಿಪಾಯ. ಆರಾಮದಾಯಕ ಮನಸ್ಥಿತಿಯಿಂದ ಮಕ್ಕಳು ಹೊರಗೆ ಬನ್ನಿ. ಇದು ನೀವು ಕಷ್ಟಪಡಬೇಕಾದ ಸಮಯ.
ಔಪಚಾರಿಕ ಶಿಕ್ಷಣವನ್ನು ವಿದ್ಯಾಸಂಸ್ಥೆಗಳು ನೀಡಿದರೆ, ಅನೌಪಚಾರಿಕ ಶಿಕ್ಷಣವನ್ನು ಮನೆ ನೀಡಲಿದೆ. ಶಾಲೆಗೆ ಸೇರಿಸಿದ ಮಾತ್ರಕ್ಕೆ ನಮ್ಮ ಜವಾಬ್ದಾರಿ ಮುಗಿಯಿತು ಎನ್ನುವ ಮನಸ್ಥಿತಿ ಬೇಡ. ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕೃತಿ ಸಂಸ್ಕಾರಗಳನ್ನು ನೀಡಿ ಎಂದು ಸಲಹೆ ನೀಡಿದರು.
ನ್ಯಾಷನಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ನವೀನ.ಎಂ.ಪಾಯಸ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸಿ.ಬಿ.ಎಸ್.ಇ ಹತ್ತನೇ ತರಗತಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post