ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಂಘಟಿತ ಪ್ರಯತ್ನದಿಂದ ನೈರುತ್ಯ ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರದ #Southwestern Graduate and Teachers Constituency ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಹತ್ತಿರವಾಗುತ್ತಿದೆ ಎಂದು ನೈರುತ್ಯ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಎಂ. ರಮೇಶ್ ಶಂಕರಘಟ್ಟ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ವಿಧಾನ ಪರಿಷತ್ತನ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಪ್ರತಿಷ್ಠೆತೆಯನ್ನಾಗಿ ತೆಗೆದುಕೊಂಡಿದೆ. ಕಳೆದ ಹಲವು ವರ್ಷಗಳಿಂದ ಈ ಕ್ಷೇತ್ರವನ್ನು ಬಿಜೆಪಿಯವರು ಗೆಲ್ಲುತ್ತ ಬಂದಿದ್ದಾರೆ. ಆದರೆ ಈ ಬಾರಿ ನಾವು ಇದಕ್ಕೆ ಬ್ರೇಕ್ ಹಾಕಿ ನಮ್ಮ ಪಕ್ಷದ ಇಬ್ಬರು ಅಭ್ಯರ್ಥಿಗಳು ಗೆಲ್ಲುವಂತೆ ಈಗಾಗಲೇ ಪ್ರಚಾರ ಮಾಡಿದ್ದೇವೆ ಎಂದರು.

ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದಲ್ಲಿ 14 ಕಾಂಗ್ರೆಸ್ ಶಾಸಕರುಗಳು ಇರುವುದರಿಂದ ನಮಗೆ ಬೆಂಬಲ ಹೆಚ್ಚಿದೆ. ಜೊತೆಗೆ ಸೋತ ಅಭ್ಯರ್ಥಿಗಳು ಮತ್ತು ಈ ಕ್ಷೇತ್ರದಲ್ಲಿ ಈ ಹಿಂದೆ ಸ್ಪರ್ಧಿಸಿರುವವರು ಈಗ ನಮ್ಮ ಜೊತೆ ಇದ್ದಾರೆ. ಪ್ರತಿ ಮತದಾರರನ್ನು ಭೇಟಿ ಮಾಡುತ್ತಿದ್ದೇವೆ. ಎಲ್ಲ ಕಡೆ ಉತ್ತಮ ವಾತಾವರಣವಿದೆ ಎಂದರು.

Also read: ರಘುಪತಿ ಭಟ್ ಹಾಗೂ ನನಗೂ ನೇರ ಹಣಾಹಣಿ | ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಸ್.ಪಿ. ದಿನೇಶ್
ಬಿಜೆಪಿ ಅಭ್ಯರ್ಥಿ ಧನಂಜಯ ಸರ್ಜಿಯವರು ಒಬ್ಬ ಉತ್ತಮ ವೈದ್ಯರು ಎಂದುಕೊಳ್ಳೋಣ. ಅವರ ಸೇವೆ ವೈದ್ಯಕೀಯವಾದದ್ದು, ಜನರಿಗೆ ಅವರನ್ನು ವಿಧಾನಪರಿಷತ್‍ಗೆ ಕಳಿಸುವುದಕ್ಕಿಂತ ವೈದ್ಯರಾಗಿಯೇ ಇರಲಿ ಎಂದು ಇಷ್ಟಪಡುತ್ತಾರೆ. ಹಾಗಾಗಿ ಸರ್ಜಿಯವರನ್ನು ವೈದ್ಯರಾಗಲು ಬಿಡಿ ಎಂದರು.

ಡಾ. ಶ್ರೀನಿವಾಸ ಕರಿಯಣ್ಣ ಮಾತನಾಡಿ, ಗ್ರಾಮಾಂತರ ಭಾಗದಲ್ಲಿ ಆಯನೂರು ಮಂಜುನಾಥ್ ಮತ್ತು ಡಾ.ಕೆ.ಕೆ.ಮಂಜುನಾಥ್‍ರವರಿಗೆ ಅಪಾರ ಬೆಂಬಲವಿದೆ. ನಾವು ಎಲ್ಲಾ ಕಡೆ ಪ್ರಚಾರ ಮಾಡುತ್ತಿದ್ದೇವೆ. ಆಯನೂರು ಮಂಜುನಾಥ್ ಅತಿಥಿ ಉಪನ್ಯಾಸಕರ ಮತ್ತು ಪದವೀಧರರ ಸಮಸ್ಯೆಗಳನ್ನು ಅರಿತವರು, ಹೋರಾಟ ಮಾಡಿದವರು ಅವರ ಗೆಲುವು ಖಚಿತ. ಹಾಗೆಯೇ ಡಾ.ಕೆ.ಕೆ.ಮಂಜುನಾಥ್ ಕೂಡ ಕಳೆದ ಬಾರಿ ಕೇವಲ 170 ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಅವರು ಕೂಡ ಗೆಲ್ಲುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಭೂಪಾಲ್, ಈಕ್ಕೇರಿ ರಮೇಶ್, ಶಾಂತವೀರನಾಯಕ, ಜಿ.ಡಿ.ಮಂಜುನಾಥ್, ಶಿ.ಜು.ಪಾಶ, ಜಿ.ಪದ್ಮನಾಭ್, ವಸಂತ ಇನ್ನಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post