ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರೀಯ ಸ್ವಯಂಸೇವಕ ಸಂಘದ RSS ಶಿವಮೊಗ್ಗ ನಗರದ ವತಿಯಿಂದ ವಿಜಯದಶಮಿ ಪ್ರಯುಕ್ತ ಗಣವೇಷಧಾರಿ ಸ್ವಯಂಸೇವಕರಿಂದ ಪಥ ಸಂಚಲನ ನಡೆಯಿತು.
ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಹೊರಟ ಪಥ ಸಂಚಲನವು ರಾಮಣ್ಣ ಶ್ರೇಷ್ಠಿ ಪಾರ್ಕ್ ವೃತ್ತ, ಬಸವೇಶ್ವರ ದೇವಸ್ಥಾನ, ಸಿದ್ದಯ್ಯ ರಸ್ತೆ, ಎಂ ಕೆ ಕೆ ರಸ್ತೆ, ಸಾವರ್ಕರ್ ಸರ್ಕಲ್, ಶಿವಪ್ಪ ನಾಯಕ ವೃತ್ತ, ಗಾಂಧಿ ಬಜಾರ್ ಅಶೋಕ ರಸ್ತೆಯ ಮುಖಾಂತರ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣ ತಲುಪಿತು.
ಪಥ ಸಂಚಲನದಲ್ಲಿ ಜಿಲ್ಲಾ ಸಂಘಚಾಲಕರಾದ ಬಿ. ಎ. ರಂಗನಾಥ್, ನಗರ ಸಂಘ ಚಾಲಕರಾದ ಲೋಕೇಶ್ವರ ಕಾಳೆ, ಸಂಸದರಾದ ಬಿ.ವೈ. ರಾಘವೇಂದ್ರ, MP BYRaghavendra ಶಾಸಕ ಎಸ್.ಎನ್. ಚನ್ನಬಸಪ್ಪ, MLA Channabasappa ಆರ್.ಎಸ್.ಎಸ್. ವಿಭಾಗಕಾರ್ಯವಾಹ ಗೀರೀಶ್ ಕಾರಂತ್, ಜಿಲ್ಲಾ ಕಾರ್ಯವಾಹ ಚೇತನ್‍ಕುಮಾರ್, ಸಚ್ಚಿದಾನಂದ ಮೊದಲಾದವರಿದ್ದರು.
Also read: ಖಾಸಗಿ ಸಂಸ್ಥೆಗಳ ನುರಿತ ತಜ್ಞರಿಂದ ಸರಕಾರಿ ಶಾಲೆ ಶಿಕ್ಷಕರಿಗೆ ತರಬೇತಿ: ಸಚಿವ ಮಧು ಬಂಗಾರಪ್ಪ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post