ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಾವು ಹೋದ ಕಡೆಯೆಲ್ಲಾ ನನ್ನನ್ನು ನೋಡಲು ಮಾತ್ರ ಜನರು ಸೇರುವುದಿಲ್ಲ ಎಂದು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ Shivarajkumar ಹೇಳಿದ್ದಾರೆ.
ನಗರ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು.
ಹೋದ ಕಡೆಯಲ್ಲೆಲ್ಲ ಅಪಾರ ಜನಸಂಖ್ಯೆ ಸೇರುತ್ತದೆ. ಕೇವಲ ಶಿವಣ್ಣನನ್ನು ನೋಡಲು ಮಾತ್ರ ಬರುವುದಿಲ್ಲ. ಅವರ ಮುಖದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತದೆ. ಗೀತಾಕ್ಕನನ್ನು ಗೆಲ್ಲಿಸಬೇಕು ಎಂಬ ಭಾವವು ಇದರಲ್ಲಿ ಸೇರಿಕೊಂಡಿರುತ್ತದೆ. ಒಂದು ಹೊಸ ಬದಲಾವಣೆ ಬೇಕಾಗಿದೆ. ಗೀತಾಳಿಗೆ ಅವಕಾಶ ಕೊಡಬೇಕು ಎಂದರು.
Also read: ಮಲೆನಾಡಿನ ಋಣ ತೀರಿಸಲು ನನಗೊಂದು ಅವಕಾಶ ಕೊಡಿ: ಗೀತಾ ಶಿವರಾಜಕುಮಾರ್ ಮನವಿ
ಈಗಾಗಲೇ ಗೀತಾ ಅವರು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಮಲೆನಾಡಿನ ಸಮಸ್ಯೆಗಳ ಬಗ್ಗೆ ಅರಿವಿದೆ. ಶಕ್ತಿಧಾಮದ ಮೂಲಕ ಶೈಕ್ಷಣಿಕ ಸೇವೆಯನ್ನು ಮಾಡುತ್ತಿದ್ದಾರೆ. ಎಲ್ಲ ಕಡೆ ಉತ್ತಮ ವಾತಾವರಣವಿದೆ. ನಂಬಿಕೆ ನಮಗೆ ಇದೆ. ನಾವು ಗೆಲ್ಲುತ್ತೇವೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಎಚ್.ಎಸ್. ಸುಂದರೇಶ್, ಎಂ. ಶ್ರೀಕಾಂತ್, ಎಸ್.ಕೆ. ಮರಿಯಪ್ಪ, ಜಿ.ಡಿ. ಮಂಜುನಾಥ್, ಆರ್. ಪ್ರಸನ್ನಕುಮಾರ್, ಕಲಗೋಡು ರತ್ನಾಕರ್ ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post