ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂಸದ ಬಿ.ವೈ. ರಾಘವೇಂದ್ರ #B Y Raghavendra ಇನ್ನೂ ಒಂದು ಲಕ್ಷ ಮತಗಳ ಎಣಿಕೆ ಬಾಕಿ ಇರುವಾಗಲೇ 2.09 ಲಕ್ಷ ಲೀಡ್ ಪಡೆದು ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಿದರು.
ಇದು ಮಹಿಳಾ ಮತ್ತು ಯುವಶಕ್ತಿಯ ಗೆಲುವಾಗಿದೆ. ಅಪಪ್ರಚಾರದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ನಮ್ಮ ಕುಟುಂಬದ, ಕಾರ್ಯಕರ್ತರು ಪಕ್ಷದ ಬಗ್ಗೆ ಹಗುರ ಮಾತನಾಡಿದರು. ದ್ವೇಷದ ಅಪಪ್ರಚಾರ ಮಾಡಿದವರಿಗೆ ಯಾವ ಜಾಗ ತೋರಿಸಬೇಕೋ ಅದನ್ನು ಜನ ತೋರಿಸಿದ್ದಾರೆ ಎಂದು ಪರೋಕ್ಷವಾಗಿ ಈಶ್ವರಪ್ಪ ಅವರಿಗೆ ಟಾಂಗ್ ಕೊಟ್ಟರು.

Also read: ಚಿಕ್ಕಬಳ್ಳಾಪುರ | ಸುಧಾಕರ್ ಭರ್ಜರಿ ಜಯ | ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆಗೆ ಒತ್ತಾಯ
ದೇವರು ಮೆಚ್ಚುವ ರೀತಿಯಲ್ಲಿ ಜನರ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾqಡುತ್ತೇನೆ, ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಹೆಚ್ಚು ಸ್ಥಾನ ಗಳಿಸಿದೆ. ಶಿವಮೊಗ್ಗ ನಗರದಿಂದ 50 ಸಾವಿರ ಲೀಡ್, ಸೊರಬದಿಂದ 18 ಸಾವಿರ, ಸಾಗರ 20, ಶಿಕಾರಿಪುರ 12 ಸಾವಿರ, ಶಿವಮೊಗ್ಗ ಗ್ರಾಮಾಂತರ 30 ಸಾವಿರ, ತೀರ್ಥಹಳ್ಳಿ 24 ಸಾವಿರ, ಬೈಂದೂರು 51 ಸಾವಿರ, ಭದ್ರಾವತಿಯಲ್ಲಿ 6 ಸಾವಿರ ಲೀಡ್ ಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post