ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರೇ ಉತ್ತರ ನೀಡುತ್ತಾರೆ ಎಂದು ಶಾಸಕ ಚನ್ನಬಸಪ್ಪ MLA Channabasappa ಹೇಳಿದರು.
ಇಲ್ಲಿನ ವಿನೋಬನಗರದಲ್ಲಿ 8ನೇ ವಾರ್ಡ್ ಬಿಜೆಪಿ ಕಾರ್ಯಕರ್ತರ ಮತ್ತು ನಾಗರಿಕರಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಡವರಿಗೆ ಸಹಾಯ ಮಾಡುವ ಗುಣ ಬಿಜೆಪಿಗೆ ಮೊದಲಿನಿಂದಲೇ ಇದೆ. ಅದಕ್ಕೆ ಸಾಕ್ಷಿ ಎಂಬಂತೆ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ BSYadiyurappa ಅವರು ಕಣ್ಮುಂದೆ ಇದ್ದಾರೆ. ಅವರು ಹಾಕಿಕೊಟ್ಟ ದಾರಿಯಲ್ಲಿಯೇ ನಾವು ಸಾಗುತ್ತಿದ್ದೇವೆ ಎಂದ ಅವರು, ಕಾಂಗ್ರೆಸ್ ಬಡವರಿಗೆ ಸಹಾಯ ಮಾಡುವ ನೆಪದಲ್ಲಿ ಈಗ ಮುಂದಾಗುತ್ತಿದೆ. ಅದು ಕೂಡ ಕುಂಟು ನೆಪ ಎಂದರು.
ಈ ವಾರ್ಡ್‍ನಲ್ಲಿ ಕೇವಲ ವ್ಯಕ್ತಿ ಅಲ್ಲ. ವಿಚಾರ ಮಾಡುವಂತಹ ಯಾವುದೇ ವ್ಯಕ್ತಿ ಅಭ್ಯರ್ಥಿಯಾಗಿ ನಿಂತರೂ ಕೂಡ ಗೆಲ್ಲುತ್ತಾರೆ. ಅದೇ ಕಾರಣಕ್ಕೆ ಇಲ್ಲಿ ಬಿಜೆಪಿ ಹೊರತು ಪಡಿಸಿ ಬೇರೆ ಪಕ್ಷ ಗೆದ್ದ ಇತಿಹಾಸ ಇಲ್ಲ.
8ನೇ ವಾರ್ಡ್ ಕಾರ್ಯಕರ್ತರಲ್ಲಿ ಒಗ್ಗಟ್ಟಿದೆ. ಹಾಗೂ ಇಲ್ಲಿಯ ಕಾರ್ಯ ಕರ್ತರ ಬಲದಿಂದ ಬಿಜೆಪಿ ಪಕ್ಷದಿಂದ ಯಾರೇ ಇಲ್ಲಿ ನಿಂತರು ಗೆಲ್ಲುತ್ತಾರೆ. ಅದಕ್ಕೆ ಸಾಕ್ಷಿ ಎಂಬಂತೆ ಕಣ್ಮುಂದೆ ನಾನೇ ಇದ್ದೇನೆ ಎಂದರು.
Also read: ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭದ್ರಾವತಿಯ ಪ್ರಾರ್ಥನಾಗೆ ಪ್ರಶಸ್ತಿ
ಬಿಜೆಪಿ ಮುಖಂಡ ಧನಂಜಯ ಸರ್ಜಿ ಮಾತನಾಡಿ, ಪಕ್ಷಕ್ಕೆ ದುಡಿದ ಕಾರ್ಯಕರ್ತರನ್ನು ಗೌರವಿಸುವ ಗುಣ ಈ ವಾರ್ಡ್‍ನಲ್ಲಿದೆ. ಚನ್ನಬಸಪ್ಪ ಅವರು ಶಾಸಕರಾಗುವ ಮುಂಚೆಯೇ ಕಾರ್ಯಕರ್ತರಾಗಿ ಜನರ ಸೇವೆ ಮಾಡಿಕೊಂಡು ಬಂದಿದ್ದಾರೆ. ಅದೇ ಕಾರಣಕ್ಕೆ ಜನ ಅವರನ್ನು ಶಾಸಕರಾಗಿ ಆಯ್ಕೆ ಮಾಡಿದ್ದಾರೆ ಎಂದರು.
ಪ್ರಮುಖರಾದ ಲಕ್ಷ್ಮೀಕಾಂತ್ ಭಟ್, ವೆಂಕಟೇಶ್ ಗೌಡ, ಎಸ್. ಕುಮಾರ್, ಪರಮೇಶ್ ನಾಯಕ್, ಶ್ರೀಕಾಂತ್, ರವೀಂದ್ರ, ಮಂಜುನಾಥ್, ಮಲ್ಲಿಕಾರ್ಜುನ ದಿನೇಶ್, ಶಂಕರ್ ಕಾರ್ಯಕ್ರಮದಲ್ಲಿ ಇದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















