ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ವಾರ್ಥಿ ಯಡಿಯೂರಪ್ಪ #Yadiyurappa ಹಾಗೂ ಅವರ ಕುಟುಂಬಸ್ಥರ ವಿರುದ್ಧ ಜನರ ಆಕ್ರೋಶ ಹೆಚ್ಚಾಗಿದ್ದು, ಈ ಬಾರಿ ನನ್ನನ್ನು ಮತದಾರರು ಗೆಲ್ಲಿಸುವುದು ನಿಶ್ಚಿತ ಎಂದು ಮಾಜಿ ಡಿಸಿಎಂ, ಸ್ವತಂತ್ರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ #K S Eshwarappa ಹೇಳಿದರು.
ತಾಲೂಕಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಅಪ್ಪ ಮಕ್ಕಳು ನಡೆಸುತ್ತಿರುವ ಕುಟುಂಬ ಹಾಗು ಜಾತಿ ರಾಜಕಾರಣ ತಮಗೆ ಬೇಕಾದವರಿಗೆ ತಮಗೆ ಮಾತ್ರ ಅಧಿಕಾರ ಬೇಕು ಎಂಬ ಸ್ವಾರ್ಥ ಭಾವನೆಯಿಂದ ಕಾರ್ಯಕರ್ತರು ಬಹಳ ನೋವು ಅನುಭವಿಸುತ್ತಿದ್ದಾರೆ. ಯಾರ ಬಳಿ ತಮ್ಮ ನೋವನ್ನು ಹಂಚಿಕೊಳ್ಳಬೇಕು ಎಂದು ತಿಳಿಯದೆ ಹತಾಶರಾಗಿದ್ದಾರೆ ನೊಂದ ಕಾರ್ಯಕರ್ತರ ಧ್ವನಿಯಾಗಲು ಸ್ಪರ್ಧೆ ಮಾಡಿದ್ದೇನೆ. ನೀವೆಲ್ಲಾ ಚುನಾವಣೆಯಲ್ಲಿ ಆಶೀರ್ವಾದ ಮಾಡಿ ಬೆಂಬಲಿಸಿ ನಾವೆಲ್ಲಾ ಸೇರಿ ಪಕ್ಷವನ್ನು ಕಟ್ಟಿ ನರೇಂದ್ರ ಮೋದಿಯವರನ್ನು ವಿಶ್ವ ನಾಯಕನನ್ನಾಗಿ ಮಾಡುವಲ್ಲಿ ಯಶಸ್ಸು ಸಾಧಿಸೋಣ ಎಂದು ಈ ಮೂಲಕ ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಕೋರಿದರು.
ಜಿಲ್ಲೆಯಲ್ಲಿ ಯಡಿಯೂರಪ್ಪ ಕುಟುಂಬ ಬಗ್ಗೆ ಬಹಳ ದೊಡ್ಡ ಮಟ್ಟದ ಆಕ್ರೋಶ ಇದೆ. ಮಗನನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಪಕ್ಷದಲ್ಲಿ ಹಿಂದುತ್ವಬಾದಿಗಳನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಕಿಡಿ ಕಾರಿದರು.
Also read: ಮೂಡಬಿದಿರೆ | ಮೇ 5 ರಂದು “ಕ್ರಿಯೇಟಿವ್ ಪುಸ್ತಕಮನೆ” ಶುಭಾರಂಭ
ಶಿಕಾರಿಪುರದಲ್ಲಿ ಜನ ಹೊರ ಬರಲು ಭಯ ಪಡುತ್ತಿದ್ದಾರೆ. ನಾನು ಪ್ರಶ್ನೆ ಮಾಡಿದಾಗ ಅವರು ಹೆದರಿಸುತ್ತಾರೆ, ಕಾರಣಗಳಿಲ್ಲದೆ ಕೇಸ್’ಗಳನ್ನು ಹಾಕಿಸುತ್ತಾರೆ. ಆದ್ದರಿಂದ ನಾವು ಹೊರ ಬರಲ್ಲ . ಮತ ಖಂಡಿತವಾಗಿ ನಿಮಗೆ ಹಾಕುತ್ತೇವೆ ಎಂದು ಬೆಂಬಲ ನೀಡಿದ್ದಾರೆ ಎಂದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೋಲಿನ ಭಯದಿಂದ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡರು ಲಿಂಗಾಯತ ಸಮಾಜದ ನಾಗರಾಜ್ ಗೌಡರನ್ನು ಹಾಗೂ ಹಿಂದುಳಿದ ಸಮಾಜದ ಗೋಣಿ ಮಾಲತೇಶ್ ರವರನ್ನು ಮಗನ ಗೆಲುವಿಗಾಗಿ ಬಲಿ ಕೊಟ್ಟರು. ಈ ಘಟನೆಯಿಂದ ಶಿಕಾರಿಪುರದ ಜನ ನೊಂದು ಯಡಿಯೂರಪ್ಪ ಕುಟುಂಬದ ವಿರುದ್ಧ ಆಕ್ರೋಶ ಭರಿತರಾಗಿದ್ದಾರೆ. ಸ್ವಾರ್ಥಿ ಯಡಿಯೂರಪ್ಪಗೆ ತಕ್ಕ ಪಾಠ ಕಲಿಸಲು ಸಿದ್ದಾಂತವನ್ನು ಆಧಾರವಾಗಿಟ್ಟುಕೊಂಡು ಹಿಂದುತ್ವದ ಉಳಿವಿಗಾಗಿ ಜನ ನನಗೆ ಮತ ಹಾಕಿ ಗೆಲ್ಲಿಸಲಿದ್ದಾರೆ ಎಂದರು.
ಶಿವಮೊಗ್ಗ ಲೋಕ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಬೆಜ್ಜವಳ್ಳಿ, ಆಗುಂಬೆ, ಮೇಗರವಳ್ಳಿ, ಕೈಮರ, ದೇವಂಗಿ, ಮೇಲಿನ ಕುರುವಳ್ಳಿ, ಕೋಣಂದೂರಿನಲ್ಲಿ ಮತ ಯಾಚನೆ ಹಾಗೂ ಸಾರ್ವಜನಿಕ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಹೇಶ್, ಶಿವು, ಸಾತ್ವಿಕ್ ಪೂಜಾರಿ, ಮಂಜುನಾಥ್ ಜೋಗಿ, ಗಣೇಶ್ ಪ್ರಸಾದ್, ಅವಿನಾಶ್, ರಾಜು, ನವುಶಾ, ಶಶಿ, ಉದಯ್, ಶಶಿ ಕುಂದರ್, ಅರುಣ್, ಕಿರಣ್, ಕವನ, ಪ್ರವೀಣ್, ನೀಲಕಂಠ, ಅಭಿಷೇಕ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
























