ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸರ್ಕಾರದ ನಡವಳಿ 18 ಸೆಪ್ಟೆಂಬರ್ 2021ರ ಪ್ರಕಾರ ಕೋವಿಡ್ 19 ರೋಗವು ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ರಡಿ ಕಾರ್ಯನಿರ್ವಹಿಸುತ್ತಿರುವ ಸಂಘಗಳಿಗೆ ವಾರ್ಷಿಕ ಮಹಾಸಭೆ/ಸರ್ವಸದಸ್ಯರ ಸಭೆಯನ್ನು ವಿಡಿಯೋ ಕಾನ್ಫರೆನ್ಸ್/ವರ್ಚುಯಲ್ ಮೀಟಿಂಗ್ ಮುಖಾಂತರ ನಿಬಂಧನೆಗೊಳಪಟ್ಟು ನಡೆಸಲು ಅನುಮತಿ ನೀಡಿ ಆದೇಶಿಸಲಾಗಿದೆ.
ಡಿಸೆಂಬರ್ 2021 ರ ಅಂತ್ಯದೊಳಗೆ ನಡೆಸಬೇಕಾಗಿರುವ ಸಂಘ ಸಂಸ್ಥೆಗಳ ವಾರ್ಷಿಕ ಮಹಾಸಭೆ/ಸರ್ವಸದಸ್ಯರ ಸಭೆಗಳಿಗೆ ಈ ಆದೇಶವರು ಅನ್ವಯವಾಗುತ್ತದೆ. ವಾರ್ಷಿಕ ಸರ್ವಸದಸ್ಯರ ಸಭೆಯನ್ನು ವಿಡಿಯೋ ಕಾನ್ಫರೆನ್ಸ್/ವರ್ಚುಯಲ್ ಮೀಟಿಂಗ್ ಮೂಲಕ ನಡೆಸಬಹುದು. ವಾರ್ಷಿಕ ಸರ್ವಸದಸ್ಯರ ಸಭೆ ನಡೆಯುವ ದಿನಾಂಕ ಮತ್ತು ವೇಳೆಯನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸುವುದು. ಸಭೆಯ ನೋಟಿಸು ಹಾಗೂ ಇನ್ನಿತರೆ ದಾಖಲಾತಿಗಳನ್ನು ಸಂಘದ ವೆಬ್ಸೈಟ್ ಮೂಲಕ ಪ್ರಚಾರಗೊಳಿಸುವುದು ಹಾಗೂ ಅನುಸರಿಸುತ್ತಿರುವ ಪದ್ದತಿಯಂತೆ ನೋಟಿಸುಗಳನ್ನು ಅಂಚೆಯ ಮೂಲಕ ರವಾನಿಸಲು ಸಹ ಕ್ರಮವಿಡತಕ್ಕದ್ದು.
ಇಂತಹ ಸಭೆಯ ನಡವಳಿಗಳನ್ನು ಅಧಿಕೃತವಾಗಿ ರೆಕಾರ್ಡ್ ಮಾಡಿ ದಾಖಲಿಸುವ ತಂತ್ರಜ್ಞಾನ ಅಳವಡಿಸಿಕೊಳ್ಳತಕ್ಕದ್ದು. ವಾರ್ಷಿಕ ಸರ್ವಸದಸ್ಯರ ಸಭೆ ನಡೆಸುವ ಸ್ಥಳದಲ್ಲಿ ಕೋವಿಡ್-19 ರ ನಿಯಮಾವಳಿಗಳಿಗೆ ಒಳಪಟ್ಟು ಹಾಜರಾತಿಯನ್ನು ನಿರ್ವಹಿಸಿ ಕರ್ನಾಟಕ ಸಂಘಗಳ ನೋಂದಣಿ ಕಾಯಿದೆ 1960 ರಡಿ ನಮೂದಿಸಿರುವ ಅಂಶಗಳನ್ನು ಕಾರ್ಯಸೂಚಿಯಲ್ಲಿ ಅಳವಡಿಸಿಕೊಂಡು ಹಾಲಿ ಪದ್ದತಿಯಂತೆ ನಡವಳಿಗಳನ್ನು ನಡೆಸಲು ಕ್ರಮ ವಹಿಸತಕ್ಕದ್ದು. ವಾರ್ಷಿಕ ಸರ್ವಸದಸ್ಯರ ಸಭೆ ನಡೆಸಲು ಕಾಲಕಾಲಕ್ಕೆ ಸರ್ಕಾರವು ಹೊರಡಿಸುವ ಕೋವಿಡ್ ಮಾರ್ಗಸೂಚಿಗಳನ್ನು ಮತ್ತು ಆದೇಶಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ಈ ಆದೇಶವು ಡಿಸೆಂಬರ್ 2021 ರವರೆಗೆ ಅಥವಾ ಮುಂದಿನ ಆದೇಶದವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ ಎಂದು ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ನೋಂದಣಾಧಿಕಾರಿಗಳು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post