ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ ಸೆಂಟ್ರಲ್ ಜೈಲ್ ನಲ್ಲಿ ಕೈದಿಗಳಿಗೆ ಗಾಂಜಾ ಮತ್ತು ಮೊಬೈಲ್ ಸರಬರಾಜಾಗುತ್ತಿವೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ನಿನ್ನೆ ಡಿ.ವೈ.ಎಸ್.ಪಿ. ಬಾಲರಾಜ್ ನೇತೃತ್ವದಲ್ಲಿ ಸೆಂಟ್ರಲ್ ಜೈಲಿಗೆ ಪೊಲೀಸರ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಪರಿಶೀಲನೆ ವೇಳೆ ಬೀಡಿ, ಸಿಗರೇಟ್ ಪತ್ತೆಯಾಗಿದ್ದು ಬಿಟ್ಟರೆ ಭೇರೇನೂ ಸಿಕ್ಕಿಲ್ಲ. ಪೊಲೀಸರ ದಿಢೀರ್ ದಾಳಿ ಪದೇ ಪದೇ ನಡೆಯುತ್ತಿದ್ದರೂ ಗಾಜಾ ಸೇವನೆ ಆರೋಪ ಕೇಳಿ ಬರುತ್ತಿವೆ. ಹಿಂದೆ ಗಾಂಜಾ, ಮಾರಕಾಸ್ತ್ರ, ಮೊಬೈಲ್ ಗಳು ಪತ್ತೆಯಾಗಿತ್ತು.

ಪ್ರೊಬೇಷನರಿ ಐಪಿಎಸ್ ಬಿಂದುಮಣಿ, ಡಿ.ವೈ.ಎಸ್.ಪಿ. ಬಾಲರಾಜ್, ಪಿಐ ಶಿವಪ್ರಸಾದ್, ತುಂಗಾನಗರ ಪಿಐ ಮಂಜುನಾಥ್, ಪಿಎಸ್ಐಗಳಾದ ವಂಸತ್, ರಾಜುರೆಡ್ಡಿ, ಕುಮಾರ್, ತಳವಾರ್, ಕುಮಾರ್ ಸೇರಿದಂತೆ 30 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಶ್ವಾನದಳ ಹಾಗೂ ಎ.ಎಸ್.ಸಿ. ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.










Discussion about this post