ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೋವಿಡ್ ಸಾಂಕ್ರಾಮಿಕದ ವಿಷಮ ಪರಿಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತೆ 2021-22ನೆಯ ಸಾಲಿನಿಂದ ಅನ್ವಯವಾಗುವಂಥೆ ಕಾನೂನು ತಿದ್ದುಪಡಿ ಮೂಲಕ ರಾಜ್ಯ ಸರ್ಕಾರವು ಅವೈಜ್ಞಾನಿಕವಾಗಿ ಹಲವು ಪಟ್ಟು ಆಸ್ತಿ ತೆರಿಗೆ ಹೆಚ್ಚಿಸಿರುವುದನ್ನು ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆ ಖಂಡಿಸಿದೆ.
ನಗರದ ಗೋಪಿ ಸರ್ಕಲ್‌ನಲ್ಲಿ ಇಂದು ಪೋಸ್ಟ್ ಕಾರ್ಡ್ ಚಳುವಳಿ ನಡೆಸಿದ ವೇದಿಕೆ ಸದಸ್ಯರು. ಎಸ್.ಆರ್. ದರ ಆಧರಿಸಿ ವಾಸದ ಮನೆಗಳು, ವಾಣಿಜ್ಯ ಕಟ್ಟಡಗಳು, ಕೈಗಾರಿಕಾ ಕಟ್ಟಡಗಳು ಮತ್ತು ಖಾಲಿ ನಿವೇಶನಗಳಿಗೆ ಈ ಹಿಂದಿನ ವರ್ಷದ ತೆರಿಗೆಯ ಮೇಲೆ ಹಲವು ಪಟ್ಟು ಹೆಚ್ಚು ತೆರಿಗೆ ಏರಿಸಿರುವುದು ತೆರಿಗೆದಾರರ ಮೇಲಿನ ಗದಾಪ್ರಹಾರವಾಗಿದೆ ಎಂದು ಹೇಳಿದರು.

ಕೋವಿಡ್ ಸಂಕಷ್ಟದ ಕಾರಣಕ್ಕಾಗಿಯೇ ಹಲವು ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಗುಜರಾತ್ ಹಾಗೂ ಇತರೆ ರಾಜ್ಯಗಳಲ್ಲಿ ಹಾಲಿ ತೆರಿಗೆಯ ಮೇಲೆ ಶೇ.50ರಷ್ಟು ರಿಯಾಯಿತು ನೀಡಿರುವುದು ನಮ್ಮ ರಾಜ್ಯದ ತೆರಿಗೆದಾರರಿಗೆ ಏಕಿಲ್ಲ ಎಂದು ವೇದಿಕೆ ಪ್ರಶ್ನಿಸಿದೆ.

ಕೋವಿಡ್ ಸಂಕಷ್ಟದಲ್ಲಿ ಆಸ್ತಿ ತೆರಿಗೆ ಹೆಚ್ಚಳ ಭರಿಸಲು ಸಾಧ್ಯವೇ ಇಲ್ಲ. 2021ರ ಆಸ್ತಿ ತೆರಿಗೆ ಕಾನೂನು ತಿದ್ದುಪಡಿ ವಾಪಸ್ಸು ಪಡೆಯಿರಿ. ಕಳೆದ ಸಾಲಿನ ಶೇ.15ರಷ್ಟು ಏರಿಕೆಯನ್ನು ಹಿಂಪಡೆಯಿರಿ ಮತ್ತು ಈ ವರ್ಷಕ್ಕೆ ಶೇ.50 ತೆರಿಗೆ ರಿಯಾಯಿತಿ ನೀಡಿ ಎಂದು ಪತ್ರದಲ್ಲಿ ಬರೆಯುವ ಮೂಲಕ ಆಸ್ತಿ ತೆರಿಗೆ ಹೆಚ್ಚಳದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















