ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಏಪ್ರಿಲ್-22 ರಿಂದ ನಿಗಧಿಪಡಿಸಿದ್ದ ಏಪ್ರಿಲ್/ಮೇ 2021ರ ವಾಣಿಜ್ಯ ಪರೀಕ್ಷೆಯ ಶೀಘ್ರಲಿಪಿ, ಮುದ್ರಣ ಹಾಗೂ ಬರವಣಿಗೆಯ ಪರೀಕ್ಷೆಗಳನ್ನು ಕೋವಿಡ್-19ರ ಸಾಂಕ್ರಾಮಿಕ ರೋಗಾಣು ಹರಡುವುದನ್ನು ತಡೆಗಟ್ಟಲು ಸರ್ಕಾರ ವಿಧಿಸಿರುವ ನಿರ್ಬಂಧಗಳ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮೂಂದೂಡಲಾಗಿದ್ದು, ಮುಂದಿನ ಪರೀಕ್ಷಾ ದಿನಾಂಕಗಳನ್ನು ನಂತರದ ದಿನಗಳಲ್ಲಿ ಅಂತರ್ಜಾಲ www.kseeb.kar.nic.in ರಲ್ಲಿ ಪ್ರಕಟಿಸಲಾಗುವುದು ಎಂದು ಮಂಡಳಿಯ ಇತರೆ ಪರೀಕ್ಷೆಗಳ ನಿರ್ದೇಶಕಿ ಎಸ್.ಗೀತಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















