ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಕೋಳಿ ಪೌಲ್ಟ್ರಿ ವೇಸ್ಟೇಜ್ ಫಾರಂ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಬಾಯ್ಲರ್’ನಲ್ಲಿ ಕರುವಿನ ತಲೆ ಪತ್ತೆಯಾದ ಘಟನೆ ನಡೆದಿದೆ.
ಕೇರಳದ ಕಮಲೇಶ್ ಎನ್ನುವವರಿಗೆ ಸೇರಿದ ಮಲ್ನಾಡ್ ಪ್ರೋರಿಚ್ ಎಂಬ ಘಟಕದಲ್ಲಿ ಶಿವಮೊಗ್ಗ ಹಾಗೂ ಭದ್ರಾವತಿಯ ಕೋಳಿ ಮಾಂಸದ ಅಂಗಡಿಗಳಿಂದ ಕೋಳಿಯ ತ್ಯಾಜ್ಯಗಳನ್ನು ಸಂಗ್ರಹಿಸಿ, ಬಾಯಲ್ ಮಾಡಿ ಅದನ್ನು ಫುಡ್ ಪ್ಯಾಕೇಟ್’ಗಳನ್ನಾಗಿ ಮಾಡುವ ಪ್ರಕ್ರಿಯೆ ನಡೆಯುತ್ತದೆ.
ಈ ಘಟಕದಲ್ಲಿ ಕೋಳಿ ತ್ಯಾಜ್ಯದೊಂದಿಗೆ ಹಸು, ಕರುಗಳನ್ನೂ ಸಹ ಸೇರಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಇಂದು ಅಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ತುಂಗಾನಗರ ಪೊಲೀಸರು ದಾಳಿ ನಡೆಸಿದ್ದಾರೆ.
Also read: ಅ.15ರಿಂದ ಶ್ರೀರೇಣುಕಾಂಬ ದೇವಿ ದಸರಾ ಉತ್ಸವ
ದಾಳಿ ವೇಳೆ ಬಾಯ್ಲರ್ ಮೇಲ್ಬಾಗದಲ್ಲಿ ಕರುವಿನ ತಲೆ ಹಾಗೂ ತ್ಯಾಜ್ಯಗಳು ಪತ್ತೆಯಾಗಿವೆ.
ಮಾಲೀಕರು ಹೇಳುವುದೇನು?
ನರಸಿಂಹ ಮೂರ್ತಿ ಎನ್ನುವವರು ನಮಗೆ ಶಿವಮೊಗ್ಗ ಹಾಗೂ ಭದ್ರಾವತಿಯಿಂದ ಕೋಳಿ ತ್ಯಾಜ್ಯಗಳನ್ನು ನಮಗೆ ಪೂರೈಕೆ ಮಾಡುತ್ತಾರೆ. ಆದರೆ, ಇಂದು ಕರುವಿನ ತಲೆ ಹೇಗೆ ಬಂದಿದೆ ಎನ್ನುವುದು ನಮಗೆ ತಿಳಿದಿಲ್ಲ ಎಂದು ಮಾಲೀಕರು ಹೇಳುತ್ತಾರೆ.
ದಾಳಿ ವೇಳೆ ಕರುವಿನ ತಲೆ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸುಮೋಟೋ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post