ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್
Pramod Mutalik ಅವರನ್ನು ಶಿವಮೊಗ್ಗ ಪೊಲೀಸರು ನಗರ ಪ್ರವೇಶ ಮಾಡದಂತೆ ತಡೆದಿರುವುದನ್ನು ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ತೀವ್ರವಾಗಿ ಖಂಡಿಸಿದರು.
ಅವರು ಇಂದು ಮೀಡಿಯಾ ಹೌಸ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಹಿಂದೂಗಳ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಮುತಾಲಿಕ್ ಅವರು ಇಂದು ರಾಗಿಗುಡ್ಡಕ್ಕೆ ಭೇಟಿ ನೀಡಲಿದ್ದರು. ನೊಂದ ಹಿಂದೂಗಳಿಗೆ ಸಾಂತ್ವನ ಹೇಳಬೇಕಿತ್ತು. ಆದರೆ ಶಿವಮೊಗ್ಗ ಪೊಲೀಸರು ರಾತ್ರಿ ಎರಡು ಗಂಟೆಗೆಯೇ ಬಸ್ಸಿನಲ್ಲಿ ಬರುತ್ತಿರುವಾಗ ಬಸ್ಸನ್ನೇ ತಡೆದು ಅವರಿಗೆ ಮೂವತ್ತು ದಿವಸದವರೆಗೆ ಗಡಿಪಾರು ಮಾಡಿ ದಾವಣಗೆರೆಗೆ ಕರೆದುಕೊಂಡು ಹೋಗಿರುವುದನ್ನು ಶ್ರೀರಾಮ ಸೇನೆ ಬಲವಾಗಿ ಖಂಡಿಸುತ್ತದೆ ಎಂದರು.

ಮುತಾಲಿಕ್ ಅವರು ಇಲ್ಲೇನು ಪ್ರತಿಭಟನೆಗೆ ಬಂದವರಲ್ಲ. ಹೋರಾಟವನ್ನು ಮಾಡುತ್ತಿರಲಿಲ್ಲ. ಹಿಂದೂಗಳಿಗಾದ ಅನ್ಯಾಯಕ್ಕೆ ಸಾಂತ್ವನ ಹೇಳಲೂಬಾರದು ಎಂದರೆ ಇದು ಪ್ರಜಾಪ್ರಭುತ್ವ ವ್ಯವಸ್ಥೆಯೇ. ಕಾಂಗ್ರೆಸ್ ಸರ್ಕಾರ ಹಕ್ಕುಗಳನ್ನು ಧಮನ ಮಾಡಲು ಹೊರಟಿದೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ. ರಾಗಿಗುಡ್ಡ ಘಟನೆ ಪೂರ್ವನಿಯೋಜಿತವಾದುದು. ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಪೊಲೀಸ್ ವರಿಷ್ಠಾಧಿಕಾರಿಗಳ ಮೇಲೆಯೇ ಹಲ್ಲೆ ಮಾಡಲು ಹೊರಟಾಗ ಅವರಿಗೆ ಅದೇಕೆ ತಮ್ಮ ಸೊಂಟದ ಬೆಲ್ಟ್‍ನಲ್ಲಿದ್ದ ಪಿಸ್ತೂಲ್ ನೆನಪಾಗಲಿಲ್ಲವೋ ಗೊತ್ತಿಲ್ಲ ಎಂದರು.
Also read: ಛಾಯಾಚಿತ್ರ, ಚಿತ್ರಕಲಾ ಪ್ರದರ್ಶನಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‍ಕುಮಾರ್ ಚಾಲನೆ
ಶಿವಮೊಗ್ಗದ ಪೊಲೀಸರಿಗೆ ಮುತಾಲಿಕ್ ಎಷ್ಟು ಹೊತ್ತಿಗೆ ಬರುತ್ತಾರೆ ಎಂಬ ಮಾಹಿತಿ ಗೊತ್ತಿರುತ್ತದೆ. ಆದರೆ ಗಲಭೆಯಲ್ಲಿ ಹಿಂದೂಗಳ ಮೇಲೆ ಕಲ್ಲೆಸೆದವರು ಯಾರು, ತಳವಾರು ಹಿಡಿದು ಝಳಪಿಸಿದವರು ಯಾರು, ಯಾವ ಭಯೋತ್ಪಾದಕರು ಶಿವಮೊಗ್ಗದಲ್ಲಿದ್ದಾರೆ ಈ ಮಾಹಿತಿಗಳು ಸಿಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಈ ಎಲ್ಲಾ ಘಟನೆಗಳನ್ನು ಇಟ್ಟುಕೊಂಡು ಹಿಂದೂಗಳ ಮೇಲೆ ಆಗುತ್ತಿರುವ ಅನ್ಯಾಯ, ಅತ್ಯಾಚಾರಗಳನ್ನು ವಿರೋಧಿಸಿ ಶಿವಮೊಗ್ಗದಲ್ಲಿ ಬರುವ ದಿನಗಳಲ್ಲಿ ಶಿವಮೊಗ್ಗ ಚಲೋ ಚಳುವಳಿಯನ್ನು ಶ್ರೀರಾಮ ಸೇನೆ ಹಮ್ಮಿಕೊಂಡಿದೆ. ಇದಕ್ಕೆ ರಾಜ್ಯಾದ್ಯಂತದ ಹಿಂದೂ ರಾಷ್ಟ್ರಭಕ್ತರು ಲಕ್ಷ ಸಂಖ್ಯೆಯಲ್ಲಿ ಬರುತ್ತಾರೆ. ಹರ್ಷನ ಕೊಲಡ ಮಾಡಿದವರು ರಾಗಿಗುಡ್ಡದಲ್ಲಿ ಹಿಂದೂಗಳ ಮನೆಗಳ ಮೇಲೆ ಕಲ್ಲು ಎಸೆದವರು, ಖಡ್ಗವನ್ನು ಪ್ರದರ್ಶಿಸಿದವರು ತಾಕತ್ತು ದಮ್ಮು ಇದ್ದರೆ ಆ ಪುಂಡ ಪೋಕರಿಗಳೆಲ್ಲ ಬರಲಿ ಎಂದು ಸವಾಲು ಹಾಕಿದರು.