ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾದ ಪ್ರಸಾದ್ ನೇತ್ರಾಲಯದಿಂದ ಶಿವಮೊಗ್ಗ ಪೊಲೀಸರಿಗೆ ಸುಸಜ್ಜಿತ ಪೊಲೀಸ್ ಚೌಕಿಯನ್ನು ಕೊಡುಗೆಯನ್ನಾಗಿ ನೀಡಲಾಯಿತು.
ಶಿವಮೊಗ್ಗ ನಗರ ಸಂಚಾರಿ ಪೋಲಿಸ್ ಅವರ ವಿನಂತಿಗೆ ಅನುಗುಣವಾಗಿ ಈ ಸೌಲಭ್ಯವನ್ನು ಅಧಿಕೃತವಾಗಿ ಅವರಿಗೆ ಹಸ್ತಾಂತರಿಸಲಾಯಿತು.
ಸಾರ್ವಜನಿಕ ಸೇವೆ ಹಾಗೂ ಸಮುದಾಯ ಬೆಂಬಲದತ್ತ ಪ್ರಸಾದ್ ನೇತ್ರಾಲಯದ ಬದ್ಧತೆಯನ್ನು ಇದು ದೃಢಪಡಿಸಿದೆ.
ಇನ್ಸೆಕ್ಟರ್ ಟಿ.ವಿ. ದೇವರಾಜ್, ಪ್ರಸಾದ್ ನೇತ್ರಾಲಯದ ಡಾ. ಬಾಲಚಂದ್ರ ತೆಗ್ಗೇಹಳ್ಳಿ, ಸಹಾಯಕ ಆಡಳಿತಾಧಿಕಾರಿ ಕೃಷ್ಣಮೂರ್ತಿ, ಸಾರ್ವಜನಿಕ ಸಂಪರ್ಕಾಧಿಕಾರಿ ವಿನಯ್ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















