ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
2047ರ ವೇಳೆಗೆ ಭಾರತವು ಸಮರ್ಥ 100 ಯುವ ನಾಯಕರನ್ನು ರಾಜಕೀಯ ಕ್ಷೇತ್ರದಲ್ಲಿ ನೋಡಬೇಕು. ಆದುದರಿಂದ, ಎನ್’ಎಸ್’ಎಸ್ #NSS ನಾಯಕತ್ವ ಗುಣ ಬೆಳೆಸಿ ಆ 100 ಜನರನ್ನು ತಯಾರು ಮಾಡಬೇಕಿದೆ ಎಂದು ಕುವೆಂಪು ವಿಶ್ವವಿದ್ಯಾಲಯ #KuvempuUniversity ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ.ಶುಭಾ ಮರವಂತೆ ಕರೆ ನೀಡಿದರು.
ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಯೋಜನೆ ಮತ್ತು ನಾಯಕತ್ವ ಎಂಬ ವಿಷಯದ ಕುರಿತು ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
2047ರ ಹೊತ್ತಿಗೆ ಭಾರತವು ಸಮರ್ಥ 100 ಯುವ ನಾಯಕರನ್ನು ರಾಜಕೀಯ #Politics ಕ್ಷೇತ್ರದಲ್ಲಿ ನೋಡಬೇಕು. ಆದುದರಿಂದ, ಎನ್’ಎಸ್’ಎಸ್ ನಾಯಕತ್ವ ಗುಣ ಬೆಳೆಸಿ ಆ 100 ಜನರನ್ನು ತಯಾರು ಮಾಡಬೇಕಿದೆ ಎಂದರು.
ಎನ್’ಎಸ್’ಎಸ್ ಹೇಗೆ ವಿದ್ಯಾರ್ಥಿಗಳಲ್ಲಿ ಉತ್ಸಾಹ ಜ್ಞಾನ, ಸೇವಾ ಮನೋಭಾವ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂಬುದರ ಮಹತ್ವವನ್ನು ತಿಳಿಸಿದರು.

ವಿದ್ಯಾರ್ಥಿಗಳಿಗೆ ಕಲ್ಲಿನಂತೆ ಸ್ತಭ್ಧವಾಗಿರಬಾರದು. ಬದಲಾಗಿ, ಗಡಿಯಾರದಂತೆ ನಿರಂತರವಾಗಿ ಚಟುವಟಿಕೆಯಿಂದ ಇರಬೇಕು. ನಮ್ಮ ಸುತ್ತಲಿನ ವ್ಯಕ್ತಿಗಳನ್ನು ಬರಿ ಹಣದಿಂದ ಮಾತ್ರ ಅಳೆಯದೆ ಹೃದಯದಿಂದ ಅನುಕಂಪದಿಂದ ಅಳೆಯಬೇಕು.
-ಡಾ.ಶುಭಾ ಮರವಂತೆ
ಉತ್ತಮ ನಾಯಕನಾದವನು ಶತ್ರುವನ್ನು ಮಿತ್ರನಾಗಿ ಬದಲಾಯಿಸಿಕೊಳ್ಳುವ ಗುಣ ಹೊಂದಿರುತ್ತಾನೆ. ಅದು ಗಾಂಧೀಜಿಯವರಲ್ಲಿತ್ತು. ನಾಯಕರು ತಾವು ಕಾರ್ಯೋನ್ಮುಖರಾಗಿ ತಮ್ಮ ತಂಡವನ್ನು ಮುನ್ನಡೆಸುತ್ತಾರೆ ಎಂದರು.
ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ನಿರ್ದೇಶಕರು ಹಾಗೂ ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆಗಳ ಶೈಕ್ಷಣಿಕ ಸಲಹೆಗಾರರಾದ ಡಾ. ರಾಜೇಂದ್ರ ಚೆನ್ನಿ ಮಾತನಾಡಿ, ಡಾ.ಶುಭ ಮರವಂತೆರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅವರ ಸೇವಾ ಅವಧಿಯಲ್ಲಿ ಹಲವು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುವುದಲ್ಲದೆ ಅವರಿಗೆ ಆಶ್ರಯವನ್ನು ನೀಡಿ ವಿದ್ಯಾರ್ಥಿಗಳ ಸರ್ವತೋಮುಖವಾದ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಅವರು ಪ್ರಥಮ ಮಹಿಳಾ ಎನ್’ಎಸ್’ಎಸ್ ರಾಜ್ಯದ ಸಂಯೋಜನಾಧಿಕಾರಿಯಾಗಿ ಅತ್ಯಂತ ಯಶಸ್ವಿಯಾಗಿ ಮುನ್ನೆಡೆಸುತ್ತಿದ್ದಾರೆ ಎಂಬುದು ಶ್ಲಾಘನೀಯ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ 2023-24ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಉತ್ತಮ ಕಾರ್ಯಕ್ರಮಾಧಿಕಾರಿ ರಾಜ್ಯ ಪ್ರಶಸ್ತಿ ಮತ್ತು 2025 ನೇ ಸಾಲಿನ ಕರ್ನಾಟಕದ ಗಾಂಧಿ ಭವನದ ಪ್ರೊ.ಜಿ.ಬಿ.ಶಿವರಾಜು ರಾಷ್ಟ್ರೀಯ ಸೇವಾ ಯೋಜನೆ ಉತ್ತಮ ಅಧಿಕಾರಿ, ಗಾಂಧಿ ಸೇವಾ ರಾಜ್ಯ ಪ್ರಶಸ್ತಿ ವಿಜೇತರಾದ ಡಾ. ಶುಭ ಮರವಂತೆಯವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಸುಕೀರ್ತಿಯವರು ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ ಮತ್ತು ರೂಪರೇಷೆಗಳ ಕುರಿತು ಮಾಹಿತಿಯನ್ನು ನೀಡಿದರು.
ತನ್ಮಯೀ ಮತ್ತು ಸಂಗಡಿಗರು ಪ್ರಾರ್ಥಿಸಿ, ಹಸೇನ್ ಅವರು ಶುಭ ಮರವಂತೆಯವರನ್ನು ಸಭೆಗೆ ಪರಿಚಯಿಸಿದರು. ಡಾ. ಸುಕೀರ್ತಿ ಸ್ವಾಗತಿಸಿ, ಆರ್. ಮೋಹನ್ ಕುಮಾರ್ ವಂದಿಸಿದರು. ಕಾರ್ಯಕ್ರಮವನ್ನು ಸ್ವಯಂ ಸೇವಕ ತೇಜಸ್ವಿ, ದ್ವಿತೀಯ ಬಿ.ಎ. ಅವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post