ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜನಪರ ಯೋಜನೆಗಳನ್ನು ಜಾರಿ ಮಾಡುವ ಮೂಲಕ ದೇಶದ ಜನತೆಯ ಪ್ರೀತಿ, ವಿಶ್ವಾಸ ಗಳಿಸಿರುವ ಹೆಮ್ಮೆಯ ಜನನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಂಸದ ರಾಘವೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಜನ್ಮದಿನಾಚರಣೆ ಪ್ರಯುಕ್ತ ಸೆ.೧೭ರಿಂದ ಅ.೨ರವರೆಗೆ ಸೇವಾಪಾಕ್ಷಿ ಅಡಿಯಲ್ಲಿ 15 ದಿನ ಪಕ್ಷದ ಚೌಕಟ್ಟಿನಲ್ಲಿ ಒಂದು ಸುದೀರ್ಘ ಸೇವಾ ಚಟುವಟಿಕೆ ಆಯೋಜಿಸಲು ರಾಷ್ಟ್ರೀಯ ಮುಖಂಡ ಜೆ.ಪಿ. ನಡ್ಡಾ ಕರೆ ನೀಡಿದ್ದಾರೆ ಎಂದು ತಿಳಿಸಿದರು.

Also read: ಫಿಜಿಯೋಥೆರಪಿಸ್ಟ್ ಗಳ ನೇಮಕಕ್ಕೆ ಅರ್ಜಿ ಆಹ್ವಾನ
ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಅಮೃತ್ ಸಹರೋವರ್ ಯೋಜನೆ ಅಡಿಯಲ್ಲಿ 100 ಅಡಿಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಕೆರೆಗಳ ಜೀರ್ಣೋದ್ಧಾರ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ದೇಶದ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 100 ಕೆರೆಗಳು 100 ಅಡಿಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಪ್ರತಿ ತಾಲೂಕಿನಲ್ಲಿ 5-8 ಕೆರೆಗಳ ಗುರಿ ನೀಡಲಾಗಿದ್ದು, ಈಗಾಗಲೇ ಜಿಲ್ಲಾ ಪಂಚಾಯತ್‌ನಿಂದ ಆಯ್ಕೆ ಪ್ರಕ್ರಿಯೆ ಮಾಡಲಾಗಿದೆ. ಕೆರೆಗಳ ಜೀರ್ಣೋದ್ಧಾರಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರದಿಂದ 10ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದ್ದು, ಸ್ಥಳೀಯರು ಕೈಜೋಡಿಸುವಂತೆ ಮನವಿ ಮಾಡಿದರು.

ಅಕ್ಟೋಬರ್ 2 ಗಾಂಧಿಜಯಂತಿ ನಿಮಿತ್ತ ಸ್ವದೇಶಿ ಆತ್ಮನಿರ್ಭಾರ್ ಭಾರತ್ ಗುರಿಯಾಗಿಸಿಕೊಂಡು ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಖಾದಿ ವ್ಯಾಪಾರಿಗಳನ್ನು ಗುರುತಿಸಿ ಗೌರವಿಸಲಾಗುವುದು ಎಂದರು.
ಸ್ಪೂರ್ತಿಯ ಚಿಲುಮೆ, ಅಂತ್ಯೋದಯ ಕನಸು ಕಂಡಿದ್ದ ಪಂಡಿತ ದೀನದಯಾಳ್ ಜನ್ಮದಿನಾಚರಣೆ ನಿಮಿತ್ತ ಸೆ.೨೫ರಂದು ಪ್ರತಿ ಬೂತ್ ಮಟ್ಟದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.











Discussion about this post