ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೋಗಾನೆ ವಿಮಾನ ನಿಲ್ದಾಣ ನಾಗರಿಕರ ಸೇವೆ ಮುಕ್ತವಾಗಿ ದಾಖಲೆ ಬರೆದ ಬೆನ್ನಲ್ಲೇ ನಗರದ ಇತಿಹಾಸದಲ್ಲಿ ಮತ್ತೊಂದು ಪುಟ ತೆರೆದುಕೊಂಡಿದೆ.
A private jet has already landed! Kuvempu Airport, Shimoga/Shivamogga. pic.twitter.com/jM2IbPg2eT
— DP SATISH (@dp_satish) September 1, 2023
ಹೌದು… ನಾಗರಿಕರ ಸಂಚಾರ ವಿಮಾನ ಇಂಡಿಗೋ ತನ್ನ ನಗರದಿಂದ ತನ್ನ ಹಾರಾಟವನ್ನು ಆರಂಭಿಸಿದ ಎರಡೇ ದಿನದಲ್ಲಿ ಸೋಗಾನೆ ವಿಮಾನ ನಿಲ್ದಾಣಕ್ಕೆ ಖಾಸಗಿ ಜೆಟ್ ವಿಮಾನವೊಂದು ಬಂದಿದೆ.
ಈ ಕುರಿತಂತೆ ಹಿರಿಯ ಪತ್ರಕರ್ತ ಡಿ.ಪಿ. ಸತೀಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಎಷ್ಟು ಗಂಟೆ ಪ್ರಯಾಣ?
ನಿನ್ನೆ ಶುಕ್ರವಾರ ಈ ಖಾಸಗಿ ಜೆಟ್ ವಿಮಾನ ನಗರಕ್ಕೆ ಆಗಮಿಸಿತ್ತು. ಬೆಳಗ್ಗೆ 9.52ಕ್ಕೆ ಬೆಂಗಳೂರಿನಿಂದ ಹೊರಟು ಬೆಳಗ್ಗೆ 10.31ಕ್ಕೆ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಿತ್ತು. ಮಧ್ಯಾಹ್ನ 1.21ಕ್ಕೆ ಶಿವಮೊಗ್ಗದಿಂದ ಹೊರಟು ಕೇವಲ 25 ನಿಮಿಷಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ತಲುಪಿದೆ.
Also read: ಇಬ್ಬರು ಸಾಧಕರಿಗೆ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ ಪ್ರದಾನ
ಅಂದರೆ ಬೆಂಗಳೂರಿನಿಂದ ಕೇವಲ ಶಿವಮೊಗ್ಗವನ್ನು ಕೇವಲ 39 ನಿಮಿಷದಲ್ಲಿ ತಲುಪಿದೆ. ಶಿವಮೊಗ್ಗದಿಂದ ಮೈಸೂರನ್ನು ಕೇವಲ 25 ನಿಮಿಷದಲ್ಲಿ ತಲುಪಿದೆ.
ಯಾರು ಬಳಸುತ್ತಾರೆ ಈ ವಿಮಾನಗಳನ್ನು?
ಸಾಮಾನ್ಯವಾಗಿ ರಾಜಕೀಯ ನಾಯಕರು, ಉದ್ಯಮಿಗಳು, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳ ಸೆಲೆಬ್ರಟಿಗಳು ಇಂತಹ ಖಾಸಗಿ ಜೆಟ್ ವಿಮಾನಗಳನ್ನು ಬಳಸುತ್ತಾರೆ. ಸಾಮಾನ್ಯ ವಿಮಾನಗಳು ಗಂಟೆಗಳ ಲೆಕ್ಕದಲ್ಲಿ ನಿಗದಿತ ಸ್ಥಳ ತಲುಪಿದರೆ, ಇಂತಹ ಪ್ರೈವೇಟ್ ಜೆಟ್’ಗಳು ನಿಮಿಷಗಳ ಲೆಕ್ಕದಲ್ಲಿ ತಲುಪುತ್ತವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post